Advertisement

PRR:ಭೂ ಪರಿಹಾರ ಬದಲಿಗೆ ಟಿಡಿಆರ್‌ ನೀಡಲು ಸಂಪುಟ ಸಭೆ ತೀರ್ಮಾನ

01:12 AM Oct 13, 2024 | Team Udayavani |

ಬೆಂಗಳೂರು: ಪೆರಿಫ‌ರಲ್‌ ರಿಂಗ್‌ರಸ್ತೆ (ಪಿಆರ್‌ಆರ್‌) ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಭೂಪರಿಹಾರದ ಬದಲಿಗೆ ಟಿಡಿಆರ್‌ ನೀಡಲು ಅನುಕೂಲವಾಗುವಂತೆ ಸಚಿವ ಸಂಪುಟ ಗುರುವಾರ ಘಟನೋತ್ತರ ಅನುಮೋದನೆ ನೀಡಿತು.

Advertisement

ಉದ್ದೇಶಿತ ಪಿಆರ್‌ಆರ್‌ ಯೋಜನೆ ಒಳಗೊಂಡ ಗ್ರಾಮಗಳ ಜಮೀನು ಕಳೆದುಕೊಂಡವರಿಗೆ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು ಸಂಧಾನಿತ ಮೊತ್ತ (ಸಂಧಾನ ಸೂತ್ರ)ದ ಮೂಲಕ ಪರಿಹಾರ ನಿಗದಿಪಡಿಸುವುದು. ಇದಕ್ಕೆ ಭೂಮಾಲಕರು ಒಪ್ಪದಿದ್ದರೆ, ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವ ಸಂಬಂಧದ ತಿದ್ದುಪಡಿಗೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.

ಯೋಜನೆ ಒಳಗೊಂಡ ಗ್ರಾಮಗಳ ಜಮೀನುಗಳ ಮಾರ್ಗಸೂಚಿ ದರಗಳು ವಿಭಿನ್ನವಾಗಿರುವುದರಿಂದ ಭೂಸ್ವಾಧೀನ ಕೈಗೊಳ್ಳುವ ಜಮೀನು ಮಾಲಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು 1994ರ ಭೂಸ್ವಾಧೀನ ಕಾಯ್ದೆ ಅಡಿ ನಿಗದಿಪಡಿಸಬಹುದಾದ ಭೂ ಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ಮೊತ್ತ ನಿಗದಿಪಡಿಸಲು ಈ ತಿದ್ದುಪಡಿ ಅನುಕೂಲ ಆಗಲಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಮಾಹಿತಿ ನೀಡಿದರು.

ಜಮೀನು ಹಂಚಿಕೆ
ಇನ್ನು ಸಣ್ಣ ಕೈಗಾರಿಕೆಗಳ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪನೆಗಾಗಿ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನಿಯಮಿತ (ಎನ್‌ಎಸ್‌ಐಸಿ)ಕ್ಕೆ ಹಂಚಿಕೆ ಮಾಡಲು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಪೀಣ್ಯ 1ನೇ ಹಂತದಲ್ಲಿರುವ ಕೈಗಾರಿಕಾ ವಸಾಹತುಗಳು ನಿವೇಶನ/ ಮಳಿಗೆ ಸಂಖ್ಯೆ ಎ-180 ಅನ್ನು 30 ವರ್ಷಗಳ ಕರಾರು ಅವಧಿಗೆ ವಾರ್ಷಿಕ ರೂ. 1 ಶುಲ್ಕದ ಆಧಾರದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದೂ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next