Advertisement

ನಿರ್ಬಂಧಿತ ವಲಯಗಳಲ್ಲಿ ಅಗತ್ಯ ವಸ್ತು ಪೂರೈಸಿ

07:36 AM Jul 22, 2020 | Suhan S |

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ, ಬೊಮ್ಮಲಾಪುರ, ಶಿಂಡನಪುರ, ದೊಡ್ಡತುಪ್ಪೂರು ಮತ್ತು ಹಂಗಳ ಗ್ರಾಮಗಳಲ್ಲಿರುವ ಕಂಟೈನ್ಮೆಂಟ್‌ ಝೋನ್‌ಗಳಿಗೆ ಜಿಪಂ ಸಿಇಒ ಹರ್ಷಲ್‌ ಬೋಯರ್‌ ನಾರಾಯಣ ರಾವ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಂಟೈನ್ಮೆಂಟ್‌ ಝೋನ್‌ಗಳಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ದೃಢೀಕೃತ ಕೋವಿಡ್‌ ಪ್ರಕರಣಗಳು ವರದಿಯಾದ ಕೂಡಲೇ ಸ್ಯಾನಿಟೈಸ್‌ ಪ್ರಕ್ರಿಯೆ ಕೈಗೊಳ್ಳಬೇಕು. ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕೆಂದು ಸೂಚಿಸಿದರು.

ಕಂಟೈನ್ಮೆಂಟ್‌ ವಲಯಗಳಲ್ಲಿ ಜನರಿಗೆ ಅಗತ್ಯವಿರುವ ಔಷಧ, ಹಾಲು, ದಿನಬಳಕೆ ಸಾಮಗ್ರಿ ಸಮರ್ಪಕವಾಗಿ ತಲುಪಿಸಬೇಕು. ಯಾರು ಹೊರ ಬರದಂತೆ ಎಚ್ಚರಿಕೆ ವಹಿಸಬೇಕು ಎಂದರು. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವಿಕೆ ಕಾರ್ಯ ತ್ವರಿತವಾಗಿ ಆಗಬೇಕು. ಸೋಂಕಿತರ ಸಂಪರ್ಕಿತರಿಗೆ ಗಂಟಲು ಮಾದರಿ ದ್ರವ ಪರೀಕ್ಷೆ, ಆರೋಗ್ಯ ದುರ್ಬಲ ವರ್ಗದವರಿಗೆ ಆದ್ಯತೆಮೇರೆಗೆ ಪರೀಕ್ಷೆ ನಡೆಸಲು ಸಹಕರಿಸುವಂತೆ ಸಿಇಒ ತಿಳಿಸಿದರು.

ಕಂಟೈನ್ಮೆಂಟ್‌ ವಲಯಗಳಲ್ಲಿನ ಆಶಾ ಕಾರ್ಯಕತೆಯರು, ಆರೋಗ್ಯ ಸಿಬ್ಬಂದಿಯವರೊಂದಿಗೆ ಸತತ ಸಂಪರ್ಕದಲ್ಲಿದ್ದು, ಅವಶ್ಯಕ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಈ ವೇಳೆ ತಾಪಂ ಇಒ ವಿ.ಪಿ.ಕುಲದೀಪ್‌, ಆಯಾ ಗ್ರಾಪಂ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next