Advertisement

ಅಟಲ್‌ ಜೀ ಆಪರೇಟರ್‌ಗಳಿಗೆ ಸೇವಾ ಭದ್ರತೆ ನೀಡಿ

02:59 PM Feb 07, 2022 | Team Udayavani |

ಗುರುಮಠಕಲ್‌: ಸುಮಾರು 14 ವರ್ಷಗಳಿಂದ ಅತ್ಯಂತ ಕಡಿಮೆ ಗೌರವಧನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದ ಕಾರಣ ರಾಜ್ಯ ಸರ್ಕಾರ ದಯವಿಟ್ಟು ಅಟಲ್‌ ಜೀ ಜನಸ್ನೇಹಿ ಕೇಂದ್ರಗಳನ್ನು ಮುಂದುವರಿಸಿ ನಮಗೆ ಸೇವಾ ಭದ್ರತೆ ನೀಡಬೇಕೆಂದು ಯಾದಗಿರಿ ಜಿಲ್ಲೆಯ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳ ಆಪರೇಟರ್‌ಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾಡ ಕಚೇರಿಯ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳ ಡೇಟಾ ಎಂಟ್ರಿ ಆಪರೇಟರ್‌ ಗಳಿಗೆ ರಾಜ್ಯ ಸರ್ಕಾರ ಯಾವುದೇ ಸೇವಾ ಭದ್ರತೆ ನೀಡುತ್ತಿಲ್ಲ. 1222 ಡೇಟಾ ಎಂಟ್ರಿ ಆಪರೇಟರ್‌ಗಳ ಕುಟುಂಬಗಳು ಇದನ್ನೇ ಅವಲಂಬಿಸಿವೆ. ಹಲವಾರು ವರ್ಷಗಳಿಂದ ಕಂದಾಯ ಇಲಾಖೆಯ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಡೇಟಾ ಎಂಟ್ರಿ ಆಪರೇಟರ್‌ ಗಳಾಗಿ ದುಡಿಯುತ್ತಿದ್ದೇವೆ. ಅದರ ಫಲವಾಗಿ ರಾಜ್ಯದ ಪರವಾಗಿ ಆಯುಕ್ತರು ರಾಷ್ಟ್ರಮಟ್ಟದ ಪ್ರಶಸ್ತಿ ಸೀಕರಿಸಿದ್ದಾರೆ ಎಂದು ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಆಪೇಟರ್‌ಗಳು ಹೆಮ್ಮೆಯಿಂದ ಹೇಳಿದರು.

ಅಟಲ್‌ಜೀ ಜನಸ್ನೇಹಿ ಕೇಂದ್ರ ನಾಡ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವು ಸರ್ಕಾರದ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸೇವೆ ನೀಡಿರುವುದರಲ್ಲಿ ಸಾರ್ವಜನಿಕರ ಪ್ರಶಂಸೆ, ಪಾರದರ್ಶಕತೆಗೆ ಹೆಸರುವಾಸಿಯಾಗಿದ್ದು, ಇದರ ಜೊತೆಗೆ ಕೋವಿಡ್‌-19 ಮಹಾಮಾರಿಯಂತಹ ತುರ್ತು ಸಂದರ್ಭದಲ್ಲಿ ಫ್ರೆಂಟ್‌ ಲೈನ್‌ ವಾರಿಯರ್ಸ್‌ ಆಗಿ ಟೋಲ್‌ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್‌ ರೂಮ್‌, ಸ್ಥಳೀಯ ಮಟ್ಟದ ಚುನಾವಣೆಯಿಂದ ಲೋಕಸಭಾ ಚುನಾವಣೆಯ ಕರ್ತವ್ಯಗಳನ್ನು ಹಗಲು-ರಾತ್ರಿ ನಿರ್ವಹಿಸುವುದರ ಜೊತೆಗೆ ಬೆಳೆ ಸಮೀಕ್ಷೆ ಮಾಡಿದ್ದೇವೆ.

ನಮ್ಮ ಈ ಸಾಮರ್ಥ್ಯ, ಸೇವೆಯನ್ನು ಮೆಚ್ಚಿ ಆಯೋಗ ಇನ್ನು ಹೆಚ್ಚಿನದಾಗಿ ವಿವಿಧ 800 ಸೇವೆಗಳನ್ನು ಅಟಲ್‌ಜೀ ಜನಸ್ನೇಹಿ ಕೇಂದ್ರದಿಂದಲೇ ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಹೀಗಿರುವಾಗ ಸತತವಾಗಿ 14 ವರ್ಷಗಳಿಂದ ನೆಮ್ಮದಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅಲ್ಪ ಮೊತ್ತದ ಗೌರವ ಧನದಲ್ಲೇ ಜೀವನ ನಡೆಸುತ್ತಿದ್ದು, ವಯೋಮಿತಿ ಮೀರಿದ್ದು ನಮ್ಮೆಲ್ಲರ ಜೀವನ ದುಸ್ತರವಾಗಿರುತ್ತದೆ ಎಂದು ಯಾದಗಿರಿ ಅಪಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಜಿಲ್ಲಾ ಸಂಯೋಜಕ ಮಧುಸುದನ ಗುರು, ಶ್ರೀನಿವಾಸರೆಡ್ಡಿ ಪತ್ತಿ, ಗೌಡಪ್ಪ ಗೌಡ, ಭೀಮರೆಡ್ಡಿ ಹೈಯಾಳ್‌, ಇಮ್ರಾನ್‌, ಜಗಲಿಂಗು, ವೀರಣ್ಣ, ಭೀಮರೆಡ್ಡಿ, ಸಂತೋಷ, ಅನೀಲ್‌ ಕುಮಾರ ಇದ್ದರು.

Advertisement

ಹತ್ತು ವರ್ಷಗಳಿಂದ ರಾಜ್ಯಾದ್ಯಂತ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಯಾವುದೇ ಸೇವಾ ಭದ್ರತೆ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾವಿರಾರು ಆಪರೇಟರ್‌ ಗಳ ಕುಟುಂಬಗಳು ಬೀದಿಪಾಲಾಗದಂತೆ ಕರ್ತವ್ಯದಲ್ಲಿ ಮುಂದುವರಿಸುವುದರ ಜೊತೆಗೆ ಸೇವಾ ಭದ್ರತೆ ನೀಡಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕು. -ಶ್ರೀನಿವಾಸ್‌ ರೆಡ್ಡಿ, ಪತ್ತಿ ಡೇಟಾ ಎಂಟ್ರಿ ಆಪರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next