Advertisement

ಸದೃಢತೆಗಾಗಿ ಪೌಷ್ಠಿಕ ಆಹಾರ ಪೂರೈಸಿ; ಜಿಲ್ಲಾಧಿಕಾರಿ ವಿಜಯಾ

01:45 PM Nov 18, 2022 | Team Udayavani |

ದೇವನಹಳ್ಳಿ: ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಪೋಷಣ್‌ ಅಭಿಯಾನದಡಿ ಪೌಷ್ಟಿಕ ಆಹಾರ ನೀಡುವ ಮೂಲಕ ಅವರನ್ನು ಸದೃಢರನ್ನಾಗಿ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ ತಿಳಿಸಿದರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪೋಷಣ ಅಭಿಯಾನ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಧಾನ್ಯಗಳು ಹಾಗೂ ಚಿಕ್ಕಿಗಳನ್ನು ನೀಡುವುದರಿಂದ ಅವರ ಬೆಳೆವಣಿಗೆಗೆ ಸಹಕಾರಿ ಆಗಲಿದೆ. ಜಿಲ್ಲೆಯಲ್ಲಿ ಒಟ್ಟು 1,230 ಅಂಗನವಾಡಿ ಕೇಂದ್ರಗಳಿದ್ದು, 973 ಅಂಗನವಾಡಿಗಳು ಸ್ವಂತ ಕಟ್ಟಡಗಳಲ್ಲಿ 02 ಅಂಗನವಾಡಿ ಪಂಚಾಯತ್‌ ಕಟ್ಟಡದಲ್ಲಿ ಹಾಗೂ 57 ಅಂಗನವಾಡಿ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ನಿವೇಶನ ಗುರುತಿಸಿ: ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ನಿವೇಶನಗಳನ್ನು ಶೀಘ್ರ ಗುರುತಿಸಬೇಕು. ಲಭ್ಯವಿರುವ ನಿವೇಶನಗಳಲ್ಲಿ ಅಂಗನ ವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಹಾಗೂ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡಗಳಲ್ಲಿ ಮೂಲಸೌಕರ್ಯ ಕಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಒಟ್ಟು 28 ಪ್ರಕರಣ ದಾಖಲು: ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಡಿ 2022ರ ಏಪ್ರಿಲ್‌ ಮಾಹೆಯಿಂದ ಸೆ. ಮಾಹೆಯ ಅಂತ್ಯಕ್ಕೆ ಒಟ್ಟು 28 ಪ್ರಕರಣ ದಾಖಲಾಗಿದ್ದು, ಈ ಪೈಕಿ ದೇವನಹಳ್ಳಿಯಲ್ಲಿ 04, ದೊಡ್ಡಬಳ್ಳಾಪುರದಲ್ಲಿ 12, ಹೊಸಕೋಟೆಯಲ್ಲಿ 06 ಹಾಗೂ ನೆಲಮಂಗಲದಲ್ಲಿ 03 ಬಾಲ್ಯವಿವಾಹ ಪ್ರಕರಣ ತಡೆಯಲಾಗಿದೆ. 03 ಪ್ರಕರಣದಲ್ಲಿ ಎಫ್ ಐಆರ್‌ ದಾಖಲಿಸಲಾಗಿದೆ. ಬಾಲ್ಯವಿವಾಹ ಕುರಿತಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಾರ್ಗದರ್ಶನ ನೀಡಿ: ಕೌಟುಂಬಿಕ ಹಿಂಸೆಯಿಂದ ನೊಂದಂತಹ ಮಹಿಳೆಯರಿಗೆ ಸಕಾಲದಲ್ಲಿ ಆಪ್ತಸಮಾಲೋಚನೆ ನಡೆಸುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನೊಂದಂತಹ ಮಹಿಳೆಗೆ ಸೂಕ್ತ ನ್ಯಾಯ ಮತ್ತು ಮಾರ್ಗದರ್ಶನ ನೀಡಬೇಕು. ಜೊತೆಗೆ ಸಖಿ ಯೋಜನೆಯಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.

Advertisement

204 ಪ್ರಕರಣ ಸಮಾಲೋಚನೆಯಿಂದ ಇತ್ಯರ್ಥ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್‌ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ರಡಿ ನಿಯಮ 2006ರ, ಸಖೀ ಯೋಜನೆಯಡಿ ದಾಖಲಾದ 101 ಪ್ರಕರಣಗಳಲ್ಲಿ 95 ಪ್ರಕರಣ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ದಾಖಲಾದ 206 ಪ್ರಕರಣಗಳಲ್ಲಿ 204 ಪ್ರಕರಣಗಳು ಸೂಕ್ತ ಸಮಾಲೋಚನೆಯಿಂದ ಇತ್ಯರ್ಥಗೊಳಿಸಲಾಗಿದೆ
ಎಂದು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಸೇರಿದಂತೆ ಸಂಬಂದಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಕಾಮಗಾರಿ ಶೀಘ್ರ ಆರಂಭಿಸಿ
ಜಲಜೀವನ್‌ ಮಿಷನ್‌ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಎರಡು ಪೈಪ್‌ಲೈನ್‌ ಮುಖಾಂತರ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳ ಒಳಗೆ ಹಾಗೂ ಶೌಚಾಲಯದ ಒಳಗೆ ನೀರಿನ ಸಂಪರ್ಕ ಇಲ್ಲದ ಅಂಗನವಾಡಿ ಕೇಂದ್ರಗಳಿಗೆ ಶೀಘ್ರ ಪೈಪ್‌ ಲೈನ್‌ ಕಾಮಗಾರಿ ಆರಂಭಿಸಬೇಕು. ಸ್ವಂತ ಕಟ್ಟಡ ಹೊಂದಿರುವ 414 ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಪೋಷಣ ಅಭಿಯಾನ ಯೋಜನೆಯಡಿ
ಪೌಷ್ಟಿಕ ಕೈತೋಟ ನಿರ್ಮಿಸಲಾಗಿದ್ದು, ಎಲ್ಲಾ ಅಂಗನ ವಾಡಿ ಕೇಂದ್ರಗಳಲ್ಲೂ ಪೌಷ್ಟಿಕ ಕೈತೋಟ ನಿರ್ಮಿ ಸಲು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿ ಕಾರಿ ವಿಜಯಾ ಈ. ರವಿಕುಮಾರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next