ಕಿಕ್ಕೇರಿ: ಕೂಲಿಕಾರ್ಮಿಕರಿಗೆ ಯಾವುದೇ ಭದ್ರತೆ ಕೇಳದೆ ಸಾಲ ಸೌಲಭ್ಯ ನೀಡಲು ಬ್ಯಾಂಕ್ ಮುಂದಾಗಬೇಕು ಎಂದುಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್ ಒತ್ತಾಯಿಸಿದರು.
ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರಲ್ಲಿ ಮನವಿ ಸಲ್ಲಿಸಿ ಮಾತನಾಡಿ, ಆರ್‌ಬಿಐ ನಿರ್ದೇಶನದಂತೆ ಕೂಲಿಕಾರರಿಗೆ ಸಾಲ ಸೌಲಭ್ಯ ನೀಡಿ. ಸುಮಾರು 1ರಿಂದ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲು ಅವಕಾಶವಿದೆ. ಈಕುರಿತು ಮಂಡ್ಯ ಸಿಇಒ ಲೀಡ್ ಬ್ಯಾಂಕ್‌ಅಧಿಕಾರಿಗಳ ಸಭೆ ನಡೆಸಿ ಸಾಲ ಸೌಲಭ್ಯ ನೀಡಲು ತಿಳಿಸಿದ್ದಾರೆ ಎಂದರು.
ಕೂಲಿಕಾರ್ಮಿಕರು ತಮ್ಮ ಬ್ಯಾಂಕಿನಲ್ಲಿ ಖಾತೆದಾರರಾಗಿ ವ್ಯವಹಾರ ನಡೆಸುತ್ತಿದ್ದಾರೆ. ಕೊರೊನಾ ಹಿನ್ನಲೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಲಿಯೂ ಇಲ್ಲ. ಬಂಡವಾಳಹಾಕಿಕೊಂಡು ವ್ಯವಹಾರ ಮಾಡಲುಹಣವೂ ಇಲ್ಲ ಎನ್ನುವಂತಾಗಿದೆ. ಇನ್ನಾದರೂಕೂಲಿಕಾರ್ಮಿಕರ ಸಮಸ್ಯೆ ಅರ್ಥ ಮಾಡಿಕೊಂಡು ಸಾಲ ನೀಡಿ.ಪ್ರಾಮಾಣಿಕವಾಗಿ ಸಾಲ ತೀರಿಸಲು ಬದ್ಧರಿರುವುದಾಗಿ ತಿಳಿಸಿದರು.
ಹೋಬಳಿಯ ಗಂಗೇನಹಳ್ಳಿ ಮತ್ತಿತರಗ್ರಾಮಗಳಿಂದ ಕೂಲಿಕಾರ್ಮಿಕರು ಆಗಮಿಸಿ ತಮ್ಮ ಸಮಸ್ಯೆ ಅಲವತ್ತುಕೊಂಡರು. ಬ್ಯಾಂಕ್ ಶಾಖಾಧಿಕಾರಿ ಪ್ರದೀಪ್‌ಪ್ರತಿಭಟನಾಕಾರರ ಮನವಿ ಆಲಿಸಿ ತ್ವರಿತವಾಗಿ 20 ಮಂದಿಗೆ ಸಾಲ ಸೌಲಭ್ಯನೀಡಲಾಗುವುದು. ವಿವಿಧ ಸೌಲಭ್ಯ ಒದಗಿಸಲು ಕಾನೂನಾತ್ಮಕವಾಗಿ ಸಹಕರಿಸುವುದಾಗಿ ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಎಂ. ಪುಟ್ಟಮಾಧು,ತಾ.ಅಧ್ಯಕ್ಷ ಜಿ.ಎಚ್.ಗಿರೀಶ್, ಸುರೇಶ್,ಗೋವಿಂದರಾಜು, ಜಮೀರ್ ಅಹಮದ್ ಇದ್ದರು.