Advertisement

ವೃತ್ತಿಗೆ ನ್ಯಾಯ ಒದಗಿಸಿ: ಶಹಾಪುರ

12:08 PM Jul 09, 2018 | |

ವಿಜಯಪುರ: ವೃತ್ತಿ ಯಾವುದಾದರೂ ಇರಲಿ, ಆ ವೃತ್ತಿಗೆ ನ್ಯಾಯ ಒದಗಿಸುವುದು ಆ ವೃತ್ತಿ ಕೈಗೊಳ್ಳುವ ವ್ಯಕ್ತಿಯ ಆದ್ಯ ಜವಾಬ್ದಾರಿ ಎಂದು ಮೇಲ್ಮನೆ ಸದಸ್ಯ ಅರುಣ ಶಹಾಪುರ ಹೇಳಿದರು.

Advertisement

ನಗರದ ಸಿದ್ದೇಶ್ವರ ಕಲಾ ಭವನದಲ್ಲಿ ನೂತನ ಚಾಣಕ್ಯ ಕೆರಿಯರ್‌ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಪ್ರಸಕ್ತ ವರ್ಷದಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಮಾರ್ಗದರ್ಶನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಅನೇಕ ಕನಸು ಕಟ್ಟಿಕೊಂಡಿದ್ದಾರೆ. ಅವರು ವೈದ್ಯರೇ ಆಗಲಿ, ಎಂಜಿನಿಯರ್‌ ಆಗಲಿ, ಕಲಾವಿದರೇ ಆಗಲಿ, ಒಟ್ಟಿನಲ್ಲಿ ತಮ್ಮ ವೃತ್ತಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬೆಂಗಳೂರು ಮೊದಲಾದ ಮಹಾನಗರಗಳಲ್ಲಿ ಉತ್ತರ ಕರ್ನಾಟಕ ಭಾಗದ ವೃತ್ತಿ ನಿರತರು ಸಿಗುವುದೇ ವಿರಳವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಸ್ಪರ್ಧಾತ್ಮಕ ಪ್ರಪಂಚದಿಂದಾಗಿ ಉತ್ತರ ಕರ್ನಾಟಕದವರು ಮಹಾನಗರಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಂದಾಗಿ ಅವಕಾಶಗಳ ದೊಡ್ಡ ಬಾಗಿಲು ತೆರೆದುಕೊಂಡಿದೆ ಎಂದರು.

ಕೇವಲ ಸಾಧನೆ ಮಾಡುವ ಉತ್ಸಾಹ ಇದ್ದರೆ ಸಾಲದು, ಆ ಸಾಧನೆಯನ್ನು ನಾನು ಮಾಡಿಯೇ ಸಿದ್ಧ ಎಂಬ ಆತ್ಮಬಲ, ಮನೋಬಲ ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು, ಸಾಧಕರ ಮಾರ್ಗದರ್ಶನ, ಗುರುವಿನ ಅನುಗ್ರಹದಿಂದಾಗಿ ಸಾಧನೆಯ ಪಥದಲ್ಲಿ ಸಾಗಬಹುದಾಗಿದೆ ಎಂದು ಕರೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ನೂತನ ಚಾಣಕ್ಯ ಕೆರಿಯರ್‌ ಅಕಾಡೆಮಿ ಮುಖ್ಯಸ್ಥ ಬಿ.ಡಿ. ಪಾಟೀಲ ಮಾತನಾಡಿ, ಕೆಲವು ವ್ಯಕ್ತಿಗಳು ನಂಬಿಸಿ ಕಣ್ಣಿಗೆ ಕಟ್ಟಿ ಕಾಡಿನಲ್ಲಿ ಬಿಟ್ಟಾಗಲೂ ಎದೆಗುಂದಬಾರದು. ದಾರಿ ಹುಡುಕಲು ಹೊಸ ಅವಕಾಶ ನೀಡಿದ್ದೀರಿ ಎಂದು ಅವರಿಗೆ ನಮಿಸಬೇಕು, ಸಮಸ್ಯೆಗಳನ್ನು ಧೈರ್ಯದಿಂಧ ಎದುರಿಸಬೇಕು ಎಂದರು.

ಉಪ ವಿಭಾಗಾಧಿಕಾರಿಗಳಾದ ಸಿದ್ಧರಾಮ ಕಂಠಿ, ಪ್ರಶಾಂತ ಹನಗಂಡಿ, ಯತೀಶ ಉಲ್ಲಾಳ, ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣನವರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಮಹೇಶ ಪೋತದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಂ.ಟಿ. ಕೋಟ್ನೀಸ್‌ ಸ್ವಾಗತಿಸಿದರು. ರಾಜಶೇಖರ ದೈವಾಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next