Advertisement

ಹಿಂದುಳಿದ ಭಾಗಕ್ಕೆ ಹೈಕ ಶಿಕ್ಷಣ ಸಂಸ್ಥೆ ಕೊಡುಗೆ ಅಪಾರ

10:40 AM Sep 11, 2017 | Team Udayavani |

ಶಹಾಬಾದ: ಶೈಕ್ಷಣಿಕ ಸೇವೆ ಸಲ್ಲಿಸುವುದರ ಮೂಲಕ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯು ಹಿಂದುಳಿದ ಭಾಗಕ್ಕೆ ಬೆನ್ನೆಲುಬಾಗಿ ಅಪಾರ ಕೊಡುಗೆ ನೀಡಿದೆ ಎಂದು ಕಲಬುರಗಿ ವಿ.ವಿ.ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ ಹೇಳಿದರು.

Advertisement

ನಗರದ ಹೈಕ ಶಿಕ್ಷಣ ಸಂಸ್ಥೆ ಅಡಿ ಎಸ್‌.ಎಸ್‌.ಮರಗೋಳ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಅವರು ಮಾತನಾಡಿದರು.

ಹೈಕ ಭಾಗದಲ್ಲಿ ಸ್ಥಾಪಿತವಾಗಿರುವ ಕಲಬುರಗಿ ವಿಶ್ವವಿದ್ಯಾಲಯ 38 ವರ್ಷದ ಹರೆಯದ್ದಾಗಿದ್ದರೆ, ಶಹಾಬಾದ
ಎಸ್‌.ಎಸ್‌. ಮರಗೊಳ ಕಾಲೇಜಿಗೆ 51 ವರ್ಷದ ಹಿರಿತನವಿದೆ. ವಿಶ್ವವಿದ್ಯಾಲಯಕ್ಕಿಂತಲೂ ಮೊದಲೇ ಹಿಂದುಳಿದ ಈ ಭಾಗದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನೆರಳಿನ ಶಹಾಬಾದನ ಎಸ್‌.ಎಸ್‌.ಮರಗೊಳ ಕಾಲೇಜು
ಶೈಕಣಿಕ ಸೇವೆ ಆರಂಭಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ಅಂಗೈಯಲ್ಲಿ ಇಡೀ ವಿಶ್ವವನ್ನೇ ಇರಿಸುವ ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಅಧ್ಯಯನ ಮಾಡಬೇಕಾಗಿದೆ. ತಂತ್ರಜ್ಞಾನದ ಫಲವಾಗಿ ಸಾಕಷ್ಟು ವಿಷಯಗಳು ಲಭಿಸುತ್ತಿವೆ. ಅದನ್ನು ಬಳಸಿಕೊಂಡರೆ
ಮುಂದೆ ಸಾಗಬಹುದು. ಇಲ್ಲವಾದರೆ ನಮ್ಮ ಜತೆಗಿರುವ ಸಹಪಾಠಿಗಳು ನಮ್ಮಿಂದ ಮುಂದೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಪಾಲಕರು ಮಕ್ಕಳ ಬಗ್ಗೆ ಸದಾ ಗಮನಹರಿಸಿ ಅವರ ಅಧ್ಯಯನಕ್ಕೆ ನೆರವಾಗಬೇಕು. ಇದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಬಹುದೆಂದು ಹೇಳಿದರು.

ಎಸ್‌.ಎಸ್‌.ಮರಗೋಳ ಪದವಿ ಕಾಲೇಜಿನ ಕಾಲೇಜಿನ ಪ್ರಾಚಾರ್ಯ ಡಾ| ಅನಿಲ ಕೊಪ್ಪಳಕರ್‌ ಮಾತನಾಡಿ,
1967ರಲ್ಲಿ ಶಹಾಬಾದಿನ ದಾಲ್‌ ಮಿಲ್‌ ಗೋದಾಮಿನಲ್ಲಿ ಆರಂಭವಾದ ಕಾಲೇಜು ಹೆಮ್ಮರವಾಗಿ ಬೆಳೆಯುವುದಕ್ಕೆ
ದಾನಿಗಳ, ಪಾಲಕರ ನೆರವು ಪ್ರಮುಖ ಕಾರಣ ಎಂದು ಹೇಳಿದರು.

Advertisement

ಕಾಲೇಜಿನ ಇತಿಹಾಸ ವಿವರಿಸಿದರು . ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಸೂರ್ಯಕಾಂತ ಬಿರಾದಾರ
ಅತಿಥಿಗಳನ್ನು ಪರಿಚಯಿಸಿದರು. ಗುವಿವಿ ಮೌಲ್ಯಮಾಪನ ಕುಲಸಚಿವ ಸಿ.ಎಸ್‌. ಪಾಟೀಲ, ಸಂಸ್ಥೆ ಅಧ್ಯಕ್ಷ ಬಸವರಾಜ
ಭೀಮಳ್ಳಿ, ಉಪಾದ್ಯಕ್ಷ ಸೂರ್ಯಕಾಂತ ಪಾಟೀಲ, ಸಂಸ್ಥೆ ಕಾರ್ಯದರ್ಶಿ ಆರ್‌.ಎಸ್‌.ಹೊಸಗೌಡ, ಶಿವಾನಂದ ಮಾನಕರ್‌, ಎನ್‌.ಡಿ. ಪಾಟೀಲ, ಜಿ.ಡಿ. ಅಣಕಲ್‌, ನಿತೀಶ ಜವಳಿ, ಡಾ| ಎ.ವಿ.ದೇಶಮುಖ , ಡಾ| ಅಶೋಕ ಪಾಟೀಲ,
ಡಾ| ಎಸ್‌.ಎಸ್‌. ಪಾಟೀಲ, ಡಾ| ಅಂಬಿಕಾ ಪ್ರಸಾದ, ದಾನಿ ಅನಿಲ ಮರಗೋಳ, ಉದಯ ಕುಮಾರ ಇತರರು ಇದ್ದರು.

ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಬುಶೇರಾ ಮತೀನ್‌, ಶೀದೇವಿ ಸೇರಿದಂತೆ 37 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಜಿ. ಪೊಲೀಸ್‌ ಪಾಟೀಲ ನಿರೂಪಿಸಿದರು, ಶಿವಕುಮಾರ ತಂಡದವರು ಪ್ರಾರ್ಥಿಸಿದರು,
ಡಾ| ಶರಣಪ್ಪ ಕವಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next