Advertisement

ಇಂಟರ್‌ನೆಟ್‌ ಸೌಲಭ್ಯ ಗ್ರಾಪಂಗಳಿಗೆ ಕಲ್ಪಿಸಿ: ಸಿದ್ದೇಶ್ವರ್‌

03:14 PM Sep 16, 2017 | Team Udayavani |

ಚಿತ್ರದುರ್ಗ: ಡಿಜಿಟಲ್‌ ಇಂಡಿಯಾದಡಿ ಎಲ್ಲ ಗ್ರಾಪಂಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವ ಮೂಲಕ ಮಾಹಿತಿ ತಂತ್ರಜ್ಞಾನದ ಲಾಭವನ್ನು ಎಲ್ಲರಿಗೂ ತಲುಪಿಸಬೇಕೆನ್ನುವ ಗುರಿ ಪ್ರಧಾನಮಂತ್ರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಪಂಗಳಿಗೂ ಇಂಟರ್‌ ನೆಟ್‌ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದರು.

Advertisement

ಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ದಾವಣಗೆರೆ ಟೆಲಿಕಾಂ ವಿಭಾಗದ ಬಿಎಸ್ಸೆನ್ನೆಲ್‌ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಡಿಜಿಟಲ್‌ ಇಂಡಿಯಾ ಕನಸು ಪ್ರಧಾನಮಂತ್ರಿಗಳದ್ದಾಗಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್‌ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ನಂಬಿರುವೆ. ಎಲ್ಲ ಗ್ರಾಪಂಗಳಲ್ಲಿ ಇಂಟರ್‌ನೆಟ್‌ ಸೌಲಭ್ಯಗಳಿರಬೇಕು.
ಅನೇಕ ಗ್ರಾಪಂಗಳಲ್ಲಿ ಇಂಟರ್‌ನೆಟ್‌ ಸೌಲಭ್ಯಗಳಿಲ್ಲದೆ ತೊಂದರೆಯಾಗಿದೆ. ಆದ್ದರಿಂದ ಸಂಸದರಿಂದಾಗಬೇಕಾದ
ಕೆಲಸಗಳಿದ್ದಲ್ಲಿ ವಿವರ ನೀಡಬೇಕು ಎಂದು ತಿಳಿಸಿದರು.

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಕಡೆ ಟವರ್‌ ಸ್ಥಾಪಿಸಲು ಈಗಾಗಲೇ ಪಟ್ಟಿಯನ್ನು ನೀಡಲಾಗಿದೆ. ಹೊನ್ನಾಳಿ ತಾಲೂಕಿನ ಹನುಮನಹಳ್ಳಿ, ಕೆಂಗನಹಳ್ಳಿ, ಫಲವ್ವನಹಳ್ಳಿ, ಚನ್ನಗಿರಿ ತಾಲೂಕಿನ ಕಗತೂರು, ಗುಡ್ಡದಕೊಮ್ಮಾರನಹಳ್ಳಿ, ದೊಡ್ಡಬ್ಬಿಗೆರೆ ಸೇರಿದಂತೆ ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಹಾಗೂ ತಣಿಗೆಹಳ್ಳಿಯಲ್ಲಿ ಟವರ್‌ ಹಾಕಲು ಮನವಿ ಮಾಡಲಾಗಿದೆ ಎಂದರು. 

ಚಿತ್ರದುರ್ಗ ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಎಲ್ಲ ಕಡೆ ದೂರವಾಣಿ ಸಂಪರ್ಕ ಸಿಗುವಂತೆ ನೋಡಿಕೊಳ್ಳಬೇಕು. ಹೊಳಲ್ಕೆರೆ ತಾಲೂಕಿನ ಹಂದನೂರು ಗ್ರಾಮದಲ್ಲಿ ಇಂಟರ್‌ನೆಟ್‌ ಸಮಸ್ಯೆ ಇದೆ ಹಾಗೂ ಚಿತ್ರದುರ್ಗ ತಾಲೂಕಿನ ಗುಡ್ಡದರಂಗವ್ವನಹಳ್ಳಿ, ಮಾಡನಾಯಕನ ಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 13 ರ ಕಾಮಗಾರಿ ನಡೆಯುತ್ತಿರುವುದರಿಂದ ಇಂಟರ್‌ನೆಟ್‌ ಸೌಲಭ್ಯ ನೀಡಲು ಸಾಧ್ಯವಾಗದಿರುವುದರಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥ ಮಾಡಿಕೊಂಡು ಇಂಟರ್‌ನೆಟ್‌ ಸೌಲಭ್ಯ ನೀಡಲು ಅಧಿಕಾರಿಗಳಿಗೆ ತಿಳಿಸಿದರು.

Advertisement

ಬಿಎಸ್ಸೆನ್ನೆಲ್‌ ದಾವಣಗೆರೆ ಪ್ರಧಾನ ಮಹಾ ಪ್ರಬಂಧಕ ವಿವೇಕ್‌ ಜಯಸ್ವಾಲ್‌, ಡಿಜಿಎಂ ನರಸಿಂಹಪ್ಪ, ಚಿತ್ರದುರ್ಗದ ಪ್ರಭಾರ ಅಧಿಕಾರಿ ಹನುಮಂತಪ್ಪ ಬಜ್ಜಾರಿ, ಸಲಹಾ ಸಮಿತಿ ಸದಸ್ಯರಾದ ಹೇಮಂತಕುಮಾರ್‌, ಅಬ್ದುಲ್‌ ರೆಹಮಾನ್‌, ಬಸವರಾಜ್‌, ಶಿವಕುಮಾರಯ್ಯ, ರವೀಂದ್ರನಾಥ್‌, ಮಹಮದ್‌, ಮೈಲಾರಪ್ಪ, ಪ್ರಸನ್ನ ಕುಮಾರ್‌, ಬಸವರಾಜಪ್ಪ. ವಿವಿಧ ವಿಭಾಗದ ಬಿಎಸ್ಸೆನ್ನೆಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next