Advertisement

ಬೆಳೆಗಳಿಗೆ ವಿಮೆ ಸೌಲಭ್ಯ ಮಾಡಿಸಿ

03:46 PM Jul 03, 2019 | Team Udayavani |

ಕೆ.ಆರ್‌.ಪೇಟೆ: ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್‌ ಮನವಿ ಮಾಡಿದರು.

Advertisement

ತಾಲೂಕಿನ ಬೂಕನಕೆರೆಯಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಸುಮಾರು 2 ಲಕ್ಷ ಆರ್‌ಟಿಸಿ ಹೊಂದಿರುವ ರೈತರಿದ್ದಾರೆ. ಕೇವಲ ಸುಮಾರು 42 ಸಾವಿರ ರೈತರ ಮಾತ್ರ ಕೃಷಿ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಕೂಡಲೇ ಗ್ರಾಪಂ ಅಥವಾ ಕೃಷಿ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಫ‌ಸಲ್ ಬಿಮಾ ಯೋಜನೆಯಡಿ ಬೆಳೆಗಳಿಗೆ ವಿಮಾ ಪಾವತಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಪಂ ಉಪಾಧ್ಯಕ್ಷೆ ಗಾಯತ್ರಿ ಮಾಹಿತಿ ರಥಕ್ಕೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು. ತಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ತಾಪಂ ಸದಸ್ಯರಾದ ಮೀನಾಕ್ಷಿ, ಕಮಲಮ್ಮ, ಪ್ರಗತಿಪರ ರೈತರಾದ ರಾಜೇಗೌಡ, ಸುಬ್ಬೇಗೌಡ, ಹೆಳವೇಗೌಡ, ರೇವಣ್ಣ, ಬಸವೇಶ್‌, ಕೃಷಿ ಅಧಿಕಾರಿಗಳಾದ ಮಾನಸ, ಆನಂದ್‌ ಕುಮಾರ್‌, ಶ್ರೀಧರ್‌, ಜಯಶಂಕರ, ಆರಾಧ್ಯ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next