ಮಂಡ್ಯ: ನಗರದ ಚಿಕ್ಕಮಂಡ್ಯ ಸಮೀಪ ವಿರುವ ವಿವೇಕಾನಂದ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸು ವಂತೆ ಆಗ್ರಹಿಸಿ ಮೂಡಾ ಅಧ್ಯಕ್ಷ ಕೆ. ಎಸ್. ದೊರೆಸ್ವಾಮಿ ಅವರಿಗೆ ವಿವೇಕಾ ನಂದನಗರ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಬಡಾವಣೆಗೆ ಭೇಟಿ ನೀಡಿದ್ದ ದೊರೆಸ್ವಾಮಿ ಅವರು, ನಿವಾಸಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಶೀಘ್ರ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು. ನಿವಾಸಿಗಳು ಬಡಾವಣೆಯಲ್ಲಿರುವ ಸಮಸ್ಯೆಗಳ ಬಗ್ಗೆ ಮೂಡಾ ಅಧ್ಯಕ್ಷರ ಗಮನಕ್ಕೆ ತಂದರು.
ಬಡಾವಣೆಯ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು. ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಸಮರ್ಪಕ ವಿದ್ಯುತ್ ದೀಪ ಅಳವಡಿಸಿ ನಿರ್ವಹಣೆ ಮಾಡಬೇಕು. ಜತೆಗೆ ಮನೆಗಳ ನಿರ್ಮಾ ಣಕ್ಕೆ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮೂಡಾ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಅವರು, ಸರ್ಕಾರದಿಂದ ಯಾವುದೇ ಅನುದಾನ ನೀಡುವುದಿಲ್ಲ.
ಇರುವುದ ರಲ್ಲೇ ಮೂಲ ಸೌಕರ್ಯ ಕಲ್ಪಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಒಕ್ಕೂಟದ ಗೌರವಾಧ್ಯಕ್ಷ ಕೀಲಾರ ಕೃಷ್ಣ, ಅಧ್ಯಕ್ಷ ಎಸ್.ಗುಣಶೇಖರ್, ಕಾರ್ಯದರ್ಶಿ ರಮೇಶ್, ಎ.ಎಸ್.ಕೃಷ್ಣಯ್ಯ, ಟಿ.ರಾಜು, ಶಿವರಾಮು ಸೇರಿದಂತೆ ಮತ್ತಿತರರಿದ್ದರು.