Advertisement

ಕ್ವಾರೆಂಟೈನ್‌ ಕೇಂದ್ರದಲ್ಲಿ ಮೂಲ ಸೌಕರ್ಯ ಒದಗಿಸಿ

05:25 PM May 23, 2020 | Team Udayavani |

ದಾಂಡೇಲಿ: ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರನ್ನು ಕ್ವಾರೆಂಟೈನ್‌ ಇಡುತ್ತಿರುವ ನಗರದ ಅಂಬೇವಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ತಂಗಳ ತಾಲೂಕಾಡಳಿತ ಮತ್ತು ನಗರಾಡಳಿತವನ್ನು ಆಗ್ರಹಿಸಿದ್ದಾರೆ.

Advertisement

ಸರಿಯಾದ ಮತ್ತು ಗುಣಮಟ್ಟದ ಊಟೋಪಚಾರ ದೊರೆಯುತ್ತಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಶೌಚಾಲಯ, ಸ್ನಾನಗೃಹಗಳಿಲ್ಲದೇ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಕ್ವಾರೆಂಟೈನ್‌ನಲ್ಲಿರುವವರಿಗೆ ಟೂತ್‌ ಬ್ರೆಶ್‌, ಪೇಸ್ಟ್‌, ಸಾಬೂನು ಸಿಗುತ್ತಿಲ್ಲ. ಬಹಳಷ್ಟು ಜನ ಉಟ್ಟ ಬಟ್ಟೆಯಿಂದಲೆ ಬಂದಿರುವುದರಿಂದ ಅವರಿಗೆಲ್ಲ ಅವರವರ ಮನೆಯಿಂದ ಬಟ್ಟೆ ತಂದುಕೊಡುವ ವ್ಯವಸ್ಥೆಯಾಗಬೇಕಾಗಿದೆ. ಬಕೆಟ್‌, ನೀರಿನ ಮಗ್‌ಗಳನ್ನು ಹೊಂದಿಸಿಕೊಡಬೇಕಾಗಿದೆ. ಕ್ವಾರೆಂಟೈನ್‌ ಕೇಂದ್ರದಲ್ಲಿರುವವರನ್ನು ಸರಿಯಾಗಿ ನೋಡಿಕೊಳ್ಳದೆ ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡದೇ ರೋಗ ಹರಡುವ ಕೇಂದ್ರವಾಗಬಹುದೆಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯ ಅವ್ಯವಸ್ಥೆಯಿಂದ ಉಪಾಹಾರ ಕೊಡುವ ಸಮಯದಲ್ಲಿ ಕ್ವಾರೆಂಟೈನ್‌ಗೊಳಗಾಗಿದ್ದವರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಈ ಕಾರಣಕ್ಕಾಗಿ ಮತ್ತು ಅವರೆಲ್ಲರ ಆರೋಗ್ಯ ಸಂರಕ್ಷಣೆಗಾಗಿ ಕೂಡಲೆ ಸೂಕ್ತ ವ್ಯವಸ್ಥೆ ಒದಗಿಸಿಕೊಡಬೇಕೆಂದು ತಹಶೀಲ್ದಾರ್‌ ಮತ್ತು ಪೌರಾಯುಕ್ತರನ್ನು ಸೈಯದ್‌ ತಂಗಳ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next