Advertisement

ನಿವೇಶನ ರಹಿತರಿಗೆ ಮನೆ ನೀಡಿ: ಮನವಿ

11:53 AM Nov 26, 2019 | Suhan S |

ಸಂಡೂರು: ನಿವೇಶನ ರಹಿತರಿಗೆ ನಿವೇಶನ ನೀಡಿ, ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದರೂ ಸಹ ಸರ್ಕಾರದಿಂದ ಸಿಗುವ ರಾಜೀವ್‌ಗಾಂಧಿ, ಅಂಬೇಡ್ಕರ್‌, ಬಸವ ವಸತಿ ಯೋಜನೆಯಲ್ಲಿ ಮನೆಗಳನ್ನೇ ಕೊಡುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಿದ್ದು ತೋರಣಗಲ್ಲು ಗ್ರಾಮದ ಜನರು ನಿರಾಶ್ರಿತರಾಗುತ್ತಿದ್ದಾರೆ. ತಕ್ಷಣ ಅವರಿಗೆ ಸರ್ಕಾರಿ ಜಮೀನಿನಲ್ಲಿ ವಸತಿ ನಿಲಯಗಳನ್ನು ಕೊಡಬೇಕು ಎಂದು ಭಾರತ ಕಮ್ಯೂನಿಷ್ಟ ( ಮಾ) ಮುಖಂಡ ಸ್ವಾಮಿ ಒತ್ತಾಯಿಸಿದರು.

Advertisement

ಅವರು ಸೋಮವಾರ ತಾಲೂಕಿನತೋರಣಗಲ್ಲಿನಲ್ಲಿ ವಿವಿಧ ಬಡ ಕೂಲಿ ಕಾರ್ಮಿಕರು ಹಾಗೂ ನಿವೇಶನ ರಹಿತರು ಹಮ್ಮಿಕೊಂಡಿದ್ದ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ತೋರಣಗಲ್ಲು ಗ್ರಾಮದಲ್ಲಿ ಸರ್ಕಾರಿ ಜಮೀನು ಸರ್ವೇ ನಂ. 497,488,293,483,219,225, ಇವುಗಳಲ್ಲಿ ಜಾಗವಿದ್ದು ಸರಿಯಾಗಿ ನಿವೇಶನ ಹಂಚಿಕೆ ಮಾಡುವ ಮೂಲಕ ಬಡವರಿಗೆ ಆಶ್ರಯ ನೀಡಬೇಕು, ಅಲ್ಲದೆ ಗ್ರಾಮದ ರೈತರಾದ ಶಿವಮ್ಮ ಗಂಡ ದಿವಂಗತ ಕುಮಾರಪ್ಪ ಇವರು ಸರ್ವೇ ನಂ. 11ರಲ್ಲಿ 7 ಎಕರೆ ಜಮೀನು ಸರ್ಕಾರದ ಬೆಲೆಗೆ ಮಾರಾಟ ಮಾಡಲು ಮುಂದೆ ಬಂದಿದ್ದು ಅದನ್ನು ಕೊಳ್ಳುವ ಮೂಲಕ ಅಕ್ರಮ ಸಕ್ರಮ ಮಾಡಿ ಮನೆಗಳನ್ನು ನೀಡಬೇಕು, ಅಲ್ಲದೆ ತಾಳೂರು ಗ್ರಾಮದಲ್ಲಿಯೂ ಸಹ ಸರ್ಕಾರಿ ಜಮೀನಿದ್ದು ಅವರಿಗೂ ಸಹ ವಸತಿ ಗಳನ್ನು ನಿರ್ಮಿಸಿ ಕಒಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭಧಲ್ಲಿ ಡಿವೈಎಫ್‌ಐ ಮುಖಂಡ ಕಾಲೂಬ್‌ ಅವರು ಮಾತನಾಡಿ, ಈಗಾಗಲೇ ಹಲವಾರು ಬಾರಿ ಹೋರಾಟ ಮಾಡಿದರೂ ಸಹ ಬಡ ಜನತೆಗೆ ಮಾತ್ರ ವಸತಿಗಳನ್ನು ನೀಡುತ್ತಿಲ್ಲ. ಅದರೆ ಇರುವ ಸರ್ಕಾರಿ ಜಮೀನನ್ನು ಶ್ರೀಮಂತ ಕಂಪನಿಗಳಿಗೆ ವ್ಯವಸ್ಥಿತವಾಗಿ ಕೊಡುವ ಹುನ್ನಾರ ನಡೆಯುತ್ತಿದೆ, ಇದು ನಿಲ್ಲಬೇಕು, ಹಲವಾರು ವರ್ಷಗಳಿಂದ ಗುಡಿಸಲುಗಳನ್ನು ಹಾಕಿಕೊಂಡಿರುವ ಬಡ ಕಾರ್ಮಿಕರನ್ನು ಒಕ್ಕಲೆಬ್ಬಿಸದೇ ಅವರಿಗೆ ನಿವೇಷನ ಮಂಜೂರು ಮಾಡಿ ಮನೆ ಕಟ್ಟಿಸಿಕೊಡಬೇಕು ಇದಕ್ಕಾಗಿ ಹಲವಾರು ಬಾರಿ ಹೋರಾಟ ಮಾಡಿದರೂ ಸಹ ಪ್ರಯೋಜನವಾಗುತ್ತಿಲ್ಲ ಮಂಜೂರು ಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ವೆಂದರು.

ಪ್ರತಿಭಟನಾ ಸ್ಥಳಕ್ಕೆ ತಾಲೂಕು ಕಾರ್ಯನಿರ್ವಾಹಕ ಅಧಿ ಕಾರಿ ಜೆ.ಎಂ. ಅನ್ನದಾನಯ್ಯ ಸ್ವಾಮಿ ಅಗಮಿಸಿ ಮನವಿ ಪತ್ರ ಸ್ವೀಕರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಎ.ಸ್ವಾಮಿ, ರಾಧ, ಅನುರಾಧ, ಸರಸ್ವತಿ, ನಿವೇ‚ಷನ ರೈತ ಮುಖಂಡರು ಯು.ತಿಪ್ಪೇಸ್ವಾಮಿ, ಹುಸೇನ್‌ ಬಿ., ವೇಬಾಕುಮಾರ್‌, ವೆಂಕಟಲಕ್ಷ್ಮೀ, ಇತರ ಹಲವಾರು ಮುಖಂಡರು ಭಾಗವಹಿಸಿ ಮನವಿ ಪತ್ರ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next