Advertisement

ಉಪಕರಣ ಕಲ್ಪಿಸಿ ಡಯಾಲಿಸಿಸ್‌ ಕೇಂದ್ರ ಆರಂಭಿಸಿ

12:57 PM Feb 22, 2021 | Team Udayavani |

ಯಳಂದೂರು: ಪಟ್ಟಣದ ಸಾರ್ವಜನಿಕರ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವಡಯಾಲಿಸಿಸ್‌ ಕಟ್ಟಡ ಕಾಮಗಾರಿಯ ಪೂರ್ಣ ಗೊಂಡು ಹಲವು ತಿಂಗಳಾದರೂ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

Advertisement

ಮಧುಮೇಹ, ಕಿಡ್ನಿ ಸಮಸ್ಯೆ ಇರುವ ರೋಗಿ ಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶ ದಿಂದ ತಾಲೂಕು ಪಂಚಾಯಿತಿ 2017-18ನೇ ಸಾಲಿನಲ್ಲಿ 1.80 ಲಕ್ಷ ರೂ., 2018-19ರಲ್ಲಿ 4.90 ಲಕ್ಷ,2019-20 ರಲ್ಲಿ 4.88 ಲಕ್ಷ ರೂ. ಹಾಗೂ2020-21ನೇ ಸಾಲಿನಲ್ಲಿ 4.5 ಲಕ್ಷ ರೂ. ಸೇರಿ ಒಟ್ಟು16.08 ಲಕ್ಷ ರೂ. ಬಳಸಿಕೊಂಡು ಕಾಮಗಾರಿ ಮಾಡಲಾಗುತ್ತಿದೆ. ಈಗ ಮುಕ್ತಾಯವಾಗಿದ್ದರೂಸಹ ಇದರ ಉದ್ಘಾಟನೆಯಾಗಿಲ್ಲ. ಮಧುಮೇಹ ಕಾಯಿಲೆ ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾರಣಾಂತಿಕ ರೋಗವಾಗಿದೆ. ಇದರ ಹತೋಟಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅತ್ಯಂತ ದುಬಾರಿ ವೆಚ್ಚದ ಔಷಧೋಪಚಾರ ರಿಯಾಯಿತಿ ದರದಲ್ಲಿ ಲಭಿಸಲಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮೂತ್ರಪಿಂಡ ವೈಫ‌ಲ್ಯ ಸಮಸ್ಯೆಹೆಚ್ಚುತ್ತಿದ್ದು, ಇದರಿಂದ ಬಡರೋಗಿಗಳು ಮೈಸೂರು ಅಥವಾ ದೊಡ್ಡ ಆಸ್ಪತ್ರೆಯಗಳಲ್ಲಿ ಹಾಗೂ ಚಾಮರಾಜನಗರ ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಒಂದು ಬಾರಿ ಡಯಾಲಿಸಿಸ್‌ ಮಾಡಲು 2-3 ಸಾವಿರ ರೂ. ಪಾವತಿಸಬೇಕಾಗುತ್ತದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬಡವರ್ಗದ ಜನರು ಅಧಿಕ ಹಣವನ್ನು ನೀಡಿ ಚಿಕಿತ್ಸೆಯನ್ನು ಪಡೆಯಲು ಬಹಳ ಕಷ್ಟಕರವಾಗುತ್ತದೆ.

ಉದ್ಘಾಟನೆ ಮಾಡಿ:

ಕಳೆದ 3 ವರ್ಷದ ಹಿಂದೆ ಶಾಸಕರಾಗಿದ ಎಸ್‌. ಜಯಣ್ಣ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದರು, ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಟ್ಟಡವನ್ನು ನಿರ್ಮಿಸಿದ್ದು, ಬಡಜನರಿಗೆ ಡಯಾಲಿಸಿಸ್‌ಕೇಂದ್ರವನ್ನು ಉದ್ಘಾಟಿಸಿ ಚಾಲನೆ ನೀಡಿದರೆ, ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಟ್ಟಡವನ್ನು ಉದ್ಘಾಟನೆ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಯಳಂದೂರು ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಕಟ್ಟಡದ ಸಂಪೂರ್ಣ ಕಾಮಗಾರಿ ಮುಗಿದಿದ್ದು, 15 ದಿನ ಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳ ಉದ್ಘಾಟನೆ ಕಾರ್ಯಕ್ರಮವನ್ನು ನಿಗದಿ ಮಾಡಿ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಆರ್‌.ಉಮೇಶ್‌, ಇಒ ತಾಪಂ

ಯಳಂದೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಡಯಾಲಿಸಿಸ್‌ ಕಟ್ಟಡ ಕಾಮಗಾರಿ ಪೂರ್ಣ ಗೊಂಡಿದೆ. ಜೊತೆಗೆ ಚಿಕಿತ್ಸೆಗೆ ಬೇಕಾದ ಪರಿಕರಗಳು, ಯಂತ್ರೋಪಕರಣಗಳು ಬರಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಡಾ.ಶ್ರೀಧರ್‌, ತಾಲೂಕು ವೈದ್ಯಾಧಿಕಾರಿ

 

ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next