ಬೇಲೂರು: ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದು ಯಗಚಿ ಜಲಾಶಯದಿಂದ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ನೀರು ಪೊರೈಸುವ ಕಾರ್ಯಕ್ಕೆ ಮುಂದಾಗುವುದು ಅಗತ್ಯ ಎಂದು ಪುಷ್ಪಗಿರಿ ಮಠದ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹೆಬ್ಟಾಳು ಗ್ರಾಮದಲ್ಲಿ ಆಯೋ ಜಿಸಿದ್ದ ಶಿವಾನುಭವಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಹೆಬ್ಟಾಳು, ಬಂಟೇನಹಳ್ಳಿ, ಹನಿಕೆ, ರಾಜನಶಿರಿಯೂರು ಗ್ರಾಮ ಪಂಚಾಯಿತಿಗೆ ಪೂರಕವಾಗಿ ಯಗಚಿ ಜಲಾಶಯದಿಂದ ನೀರು ನೀಡುವ ಯೋಜನೆ ರೂಪಿಸುವಂತಾಗಬೇಕು ಎಂದರು.
ಸಿಎಂಗೆ ಮನವಿ: ಬೇಲೂರು ಶಾಸಕರ ಜೊತೆ ಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಕಳೆದ 10 ದಿನಗಳಿಂದ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಭಾರಿ ಮಳೆಗೆ ಪ್ರವಾಹಕ್ಕೆ ಪ್ರಾಣ ಹಾನಿ ಮತ್ತು ಅಪಾರ ಪ್ರಮಾಣದ ಬೆಳೆ ನಷ್ಟ ವಾಗಿದೆ. ಆದರೆ ಬರುತ್ತಿರುವ ನೀರನ್ನು ಇಂಗಿಸುವ ಯೋಜನೆಗಳನ್ನು ಸರ್ಕಾರ ಮಾಡಿಲ್ಲ ಎಂದರು.
ಕೆರೆ-ಕಟ್ಟೆಗಳನ್ನು ನಾಶ ಮಾಡಿದ ಕಾರಣದಿಂದಲೇ ಇಂದು ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ ಎಂದ ಅವರು, ತಾಲೂಕಿನ ಬಯಲು ಸೀಮೆಗೆ ಸದ್ಯ ಯಗಚಿ ಏತನೀರಾವರಿ, ರಣಘಟ್ಟ ಹಾಗೂ ಎತ್ತಿನಹೊಳೆ ಯೋಜನೆಯಿಂದ ಸಹಾಯ ವಾಗಲಿದೆ, ಇತ್ತೀಚಿನ ದಿನದಲ್ಲಿ ಕೌಟುಂಬಿ ಬದುಕಿನಲ್ಲಿ ನೆಮ್ಮದಿ ಇಲ್ಲದೇ ಜನರು ಒತ್ತಡದ ಜೀವನದಿಂದ ಪೋಷಕರನ್ನು ಮರೆತು ಹಣ ಅಧಿಕಾರ ಮಾಡುವ ಕಡೆ ಗಮನ ನೀಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಶಿವಾನುಭವ ಗೋಷ್ಠಿಗಳು ಮಾನವ ಸುಂದರ ಬದುಕಿಗೆ ದಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಪ್ತ ಕಾರ್ಯ ದರ್ಶಿ ವಿರೂಪಾಕ್ಷ ಮುಖಂಡರಾದ ರಾಜ ಶೇಖರ್, ಎಚ್.ಜಿ.ಭುವನೇಶ್, ಉದ್ಯಮಿ ಸುಧಾ ಕರ್, ಬಿ.ಎಸ್.ದೊಡ್ಡೕರೇಗೌಡ, ರಾಜಶೇಖರ, ಹಾಲಪ್ಪ ಮುಂತಾದವರು ಹಾಜರಿದ್ದರು.