Advertisement

ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ

03:16 PM Mar 08, 2022 | Team Udayavani |

ಕೆ.ಆರ್‌.ನಗರ: ತಾಲೂಕಿನ ಕಪ್ಪಡಿ ರಾಚಪ್ಪಾಜಿಯವರ ವಾರ್ಷಿಕ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸರ್ಕಾರದ ಕೊರೊನಾನಿಯಮಗಳನ್ನು ಪಾಲಿಸಿ ತಾಲೂಕು ಆಡಳಿತ ಅಗತ್ಯ ಮೂಲ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ರಾಚಪ್ಪಾಜಿಯವರ ಗದ್ದುಗೆ ಆವರಣದಲ್ಲಿ ವರ್ಚಸ್ವಿ ಶ್ರಿಕಂಠ ಸಿದ್ದಲಿಂಗ ರೊಂದಿಗೆತಾಲೂಕು ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಳೆದ ಎರಡುವರ್ಷಗಳಿಂದ ಕೊರೊನಾ ಸೋಂಕಿನ ಕಾರಣದಿಂದ ಸ್ಥಗಿತವಾಗಿದ್ದ ಜಾತ್ರೆ ಈ ಬಾರಿಉತ್ತಮವಾಗಿ ನಡೆಯಲು ಎಲ್ಲರೂ ಸಹಕಾರನೀಡಬೇಕು ಎಂದರು.

ಬಸ್‌ ವ್ಯವಸ್ಥೆ ಕಲ್ಪಿಸಿ: ಜಾತ್ರೆ ನಡೆಯುವಾಗನಾಲೆಯಲ್ಲಿ ನೀರಿನ ಹರಿವು ಇರುವಂತೆನೋಡಿ ಕೊಳ್ಳಬೇಕು ಎಂದು ಕೆ.ಆರ್‌.ನಗರಹಾರಂಗಿ ಉಪವಿಭಾಗದ ಸಹಾಯಕಕಾರ್ಯಪಾಲಕ ಅಭಿಯಂತರ ಬಿ.ಜೆ.ಗುರುರಾಜ್‌ ಅವರಿಗೆ ಸೂಚನೆ ನೀಡಿದ ಶಾಸಕರು, ಸಾರಿಗೆ ಇಲಾಖೆಯ ಅಧಿಕಾರಿಗಳು ಕೆ.ಆರ್‌.ನಗರ ‌ದಿಂದ- ಕಪ್ಪಡಿಗೆ ನಿಯಮಿತವಾಗಿ ಬಸ್‌ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶಿಸಿದರು.

ಆರೋಗ್ಯ ಇಲಾಖೆಯವರು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯುವುದರ ಜತೆಗೆ ಸ್ವಚ್ಛತೆಗೆಹೆಚ್ಚಿನ ಆದ್ಯತೆಯನ್ನು ನೀಡಿ, ಆಗಾಗ ಜಾತ್ರೆಗೆ ಭೇಟಿ ನೀಡಿ ಪರಿಶೀಲಿಸಿ ನನಗೆ ವರದಿ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್‌. ಮಹೇಂದ್ರಪ್ಪ ಅವರಿಗೆ ತಿಳಿಸಿದರು.

ಜಾತ್ರೆ ಯಶಸ್ವಿಗೆ ಕೈಜೋಡಿಸಿ: ಹೆಬ್ಟಾಳುಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತುಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಿತ್ಯ ಕಪ್ಪಡಿಜಾತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಯಾವುದೇ ಸಮಸ್ಯೆಗಳಿದ್ದರೂ ಕೂಡಲೇ ನನ್ನಗಮನಕ್ಕೆ ತರಬೇಕೆಂದು ತಾಕೀತು ಮಾಡಿದಅವರು, ಇತರ ಅಧಿಕಾರಿಗಳು ಶ್ರೀಮಠದಸ್ವಾಮೀಜಿಗಳಿಗೆ ಜಾತ್ರೆ ಯಶಸ್ವಿಯಾಗಿನಡೆಯಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

Advertisement

30 ಅಡಿ ಎತ್ತರದ ಏಕಶಿಲಾ ಆಂಜನೇಯ ಮೆರವಣಿಗೆ: ಏ.8ರಂದು ಶುಕ್ರವಾರ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಗೆ 30 ಅಡಿ ಎತ್ತರದ ಏಕಶಿಲಾ ಆಂಜನೇಯಸ್ವಾಮಿಮೂರ್ತಿಯ ವಿಗ್ರಹವನ್ನು ಮೈಸೂರಿನಿಂದಮೆರವಣಿಗೆಯ ಮೂಲಕ ಕರೆತರಲಿದ್ದು, 15ದಿನಗಳು ವಿವಿಧ ಧಾರ್ಮಿಕ ಕಾರ್ಯಗಳನ್ನುನಡೆಸಿ ಆನಂತರ ಪ್ರತಿಷ್ಠಾಪನೆಯ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸಭೆಯಲ್ಲಿ ಸಾ.ರಾ.ಮಹೇಶ್‌ ಪ್ರಕಟಿಸಿದರು.

ತಾಲೂಕು ಯುವ ಜೆಡಿಎಸ್‌ ಮಾಜಿಅಧ್ಯಕ್ಷ ಎಚ್‌.ಕೆ.ಸುಜಯ್‌, ಮಠದಕಾರ್ಯದರ್ಶಿ  ,ಹೆಬ್ಟಾಳು ಗ್ರಾಪಂ ಅಧ್ಯಕ್ಷೆ ಭವ್ಯಸತೀಶ್‌, ಮಾಜಿಅಧ್ಯಕ್ಷರಾದ ಎಚ್‌.ಕೆ.ಪುಟ್ಟೇಗೌಡ,ಮಾದೇಗೌಡ, ಸದಸ್ಯರಾದ ಕಾಂತರಾಜು,ಎಚ್‌.ಎಸ್‌.ರವಿಕುಮಾರ್‌, ಮಂಜುನಾಥ್‌,ತೀರ್ಥೇಶ್‌, ಮುಖಂಡರಾದ ಎಚ್‌.ಪಿ.ಚಂದ್ರಶೇಖರ್‌, ಪ್ರಕಾಶ್‌, ಭೈರಪ್ಪ,ಕುಮಾರಬುದ್ಧಿ, ಸತೀಶ್‌, ತಹಶೀಲ್ದಾರ್‌ ಎಸ್‌.ಸಂತೋಷ್‌, ತಾಪಂ ಇಒ ಎಚ್‌.ಕೆ.ಸತೀಶ್‌,ಬಿಇಒ ಟಿ.ಎನ್‌.ಗಾಯತ್ರಿ, ಸೆಸ್ಕ್ ಎಇಇಅರ್ಕೇಶ್‌ಮೂರ್ತಿ, ಪಿಡಿಒ ನೇತ್ರಾವತಿ ಇದ್ದರು .

ಬಿಗಿ ಪೊಲೀಸ್‌ ಭದ್ರತೆಗೆ ಸೂಚನೆ :

ಜಾತ್ರೆಗೆ ಆಗಮಿಸುವ ಭಕ್ತರಿಗೆ ಗೃಹರಕ್ಷಕ ದಳದವರು ಮತ್ತು ಪೊಲೀಸರಿಂದ ಅನಗತ್ಯವಾಗಿ ಯಾವುದೇ ತೊಂದರೆಯಾಗದಂತೆ ಸೂಕ್ತ ಗಮನ ಹರಿಸಿ ವ್ಯಾಪಕ ಭದ್ರತೆ ಕೈಗೊಳ್ಳಬೇಕುಎಂದು ಪೊಲೀಸ್‌ ವೃತ್ತ ನಿರೀಕ್ಷಕ ಆರ್‌.ಶ್ರೀಕಾಂತ್‌ ಅವರಿಗೆ ಮಾಹಿತಿ ನೀಡಿದ ಶಾಸಕರು, ಸೆಸ್ಕ್ ಇಲಾಖೆಯವರು ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನಿಗಾವಹಿಸಿ ಮಠದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಎಂದು ಶಾಸಕ ಸಾರಾ ಮಹೇಶ್‌ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next