Advertisement

ವಸತಿ ನಿಲಯಕ್ಕೆ ಸೌಕರ್ಯ ಒದಗಿಸಿ

12:53 PM Jul 29, 2019 | Team Udayavani |

ಹುನಗುಂದ: ಪಟ್ಟಣದ ಪರಿಶಿಷ್ಟ ಜಾತಿಯ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ತಹಶೀಲ್ದಾರ್‌ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ವಸತಿ ನಿಲಯದ ವಿದ್ಯಾರ್ಥಿಗಳ ಅನೇಕ ಸಮಸ್ಯೆಗೆ ಸ್ಪಂದಿಸದಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯ ಮೇಲೆ ಶಿಸ್ತಿನ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿರಸ್ತೇದಾರ ಸುಭಾಸ ಗೌಡರಗೆ ಮನವಿ ಸಲ್ಲಿಸಿದರು.

ಕಳೆದ 2017ರಲ್ಲಿ 1.99 ಕೋಟಿ ಅನುದಾನದಲ್ಲಿ ನೂರು ವಿದ್ಯಾರ್ಥಿಗಳ ವಾಸಕ್ಕೆ ಅನುಕೂಲವಾಗುವ ಕಟ್ಟಡ ನಿರ್ಮಿಸಲಾಗಿದೆ. ಆದರೆ ಎರಡು ವರ್ಷಗಳಾದರೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದರಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಫಲವಾಗಿದೆ. ಇಲ್ಲಿನ ಅನೇಕ ಸಮಸ್ಯೆಗಳಿಂದ ನಿತ್ಯ ಪಡಬಾರದ ಕಷ್ಟ ಸಂಕಷ್ಟ ಅನುಭವಿಸುತ್ತಿದ್ದು, ಇದರ ಬಗ್ಗೆ ಸಾಕಷ್ಟು ಸಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಿಲಯದ ಮೇಲ್ವಿಚಾರಕರ ಮೂಲಕ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಲಿಖೀತ ರೂಪದಲ್ಲಿ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸ್ಟೆಲ್ ಕಟ್ಟಡವು ಮಳೆಯಾದರೇ ಅಲ್ಲಲ್ಲಿ ಸೋರುತ್ತಿದೆ. ಇದನ್ನು ದುರಸ್ತಿಗೊಳಿಸದೇ ಇರುವುದರಿಂದ ಮಳೆ ಬಂದಾಗ ನರಕಯಾತನೆ ಅನುಭವಿಸುವಂತಾಗಿದೆ. ಸೋಲಾರ್‌ ವಾಟರ್‌ ಹೀಟರ್‌ ವ್ಯವಸ್ಥೆ ಇಲ್ಲದಿರುವುದರಿಂದ ನಿತ್ಯ ತಣ್ಣೀರಿನ ಸ್ನಾನ ಮಾಡುವಂತಾಗಿದೆ. ಆಟದ ಮೈದಾನವಿಲ್ಲ ಮತ್ತು ಕ್ರೀಡಾ ಸಾಮಗ್ರಿಗಳು ಮೊದಲೇ ಇಲ್ಲ. ಗಣಕಯಂತ್ರವು ಕೂಡಾ ಇಲ್ಲ. ಕಾಲೇಜು ಪಠ್ಯದ ಜೊತೆಗೆ ಇತರೆ ಪುಸ್ತಕ ಅಧ್ಯಯನ ಮಾಡಲು ಗ್ರಂಥಾಲಯವಿಲ್ಲ. ಕಳೆದ ಜು. 25 ರಂದು ಮೂಲಭೂತ ಸೌಲಭ್ಯ ಕೇಳಲು ಹೋದ ವಸತಿ ವಿದ್ಯಾರ್ಥಿಗಳಿಗೆ ತಾಲೂಕ ಸಹಾಯಕ ನಿರ್ದೇಶಕಿ ಎಸ್‌.ಆರ್‌. ನದಾಫ್‌ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ನಿತ್ಯ ಅನುಭವಿಸುತ್ತಿರುವ ಈ ಎಲ್ಲ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಾಗ ಅವರು ತಮ್ಮ ಜೀವನದ ಕಥೆಯನ್ನು ಹೇಳಿದರೇ ಹೊರೆತು ಬೇಡಿಕೆ ಈಡೇರಿಸುವ ಬಗ್ಗೆ ಮಾತನಾಡಿಲ್ಲ ಎಂದರು.

Advertisement

ಪ್ರತಿಭಟನೆಯಲ್ಲಿ ಎಬಿವಿಪಿಯ ನಗರ ಘಟಕದ ಅಧ್ಯಕ್ಷ ನವೀನ ಪಾಟೀಲ, ಬೀರೇಶ ಮಾದರ, ಮಾರುತಿ ದಾಸರ, ಕೃಷ್ಣ ವಡ್ಡರ, ಸಂತೋಷ ಚಲವಾದಿ, ಮಂಜುನಾಥ ಚಲವಾದಿ, ನಟರಾಜ ವಡ್ಡರ, ಹನಮಂತ ಮಾದರ, ಶಶಿಕುಮಾರ ಮಾಗಿ, ಅನಿಲಕುಮಾರ, ಮಂಜುನಾಥ ದಾಸರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next