Advertisement

ಹೂ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸಿ

03:28 PM Oct 10, 2020 | Suhan S |

ಗೌರಿಬಿದನೂರು: ನಗರದ ಮಾರುಕಟ್ಟೆ ಜಾಗದಲ್ಲಿ ತಾಲೂಕಿನ ರೈತ ಮತ್ತು ಹೂ ಬೆಳೆಗಾರರಿಗೆ ಸೂಕ್ತಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಕರವೇ ಮತ್ತು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

Advertisement

ಕರವೇ ಅಧ್ಯಕ್ಷ ಜಿ.ಎಲ್‌.ಅಶ್ವತ್ಥ ನಾರಾಯಣ್‌ ಮಾತನಾಡಿ, ನಗರದ ಕೇಂದ್ರ ಸ್ಥಾನದಲ್ಲಿರುವ ಮಾರುಕಟ್ಟೆ ಯಲ್ಲಿ ಹೂ ಬೆಳೆಗಾರರಿಗೆ ಸೂಕ್ವ್ಯವಸ್ಥೆ ಮಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ದಲ್ಲಾಳಿಗಳ ಹಾವಳಿ, ಬೇರೆ ತಾಲೂಕಿನ ಹೂ ದಲ್ಲಾಳಿಗಳು ಖರೀದಿ ಮಾಡಿ ಇಲ್ಲಿ ತಂದು ಹೆಚ್ಚಿನ ಬೆಲೆ ಮಾರಾಟಮಾಡುತ್ತಿದ್ದಾರೆ. ಸ್ಥಳೀಯ ರೈತ ಮತ್ತುಹೂ ಬೆಳೆಗಾರರಿಗೆ ಅನ್ಯಾಯವಾಗಿದೆ.ಈ ಬಗ್ಗೆ ಸ್ಥಳೀಯ ಅಧಿಕಾರಿಗಳುಆಸಕ್ತಿ ತೋರುತ್ತಿಲ್ಲ. ಇಲ್ಲಿನ ಹೂ ಬೆಳೆ ಗಾರರು ಸರಿಯಾದ ಬೆಲೆ ಸಿಗದೇ ಹೂವನ್ನುಬೀದಿಗೆಸುರಿಯುತ್ತಿದ್ದಾರೆ. ಆದ್ದರಿಂದ ಸ್ಥಳೀಯರಿಗೆ ರೈತ ಮಾರುಕಟ್ಟೆ ಕಲ್ಪಿಸಲು ಮುಂದಾ ಬೇಕು ಎಂದು ಒತ್ತಾಯಿಸಿದರು.

ರೈತ ಸಂಘದಗೌರವಾಧ್ಯಕ್ಷಮಾಳಪ್ಪ ಮಾತನಾಡಿ, ಇತ್ತೀಚೆಗೆ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ಹೂ ಬೆಳೆಗಾರರಿಗೆ ಅನುಕೂಲವಾಗಿದೆ. ಆದರೆ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಮಾರಾಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇಲ್ಲಿನ ನಗರಸಭೆ ಅಧಿಕಾರಿಗಳು ಸ್ಥಳೀಯ ಮಾರಾಟಗಾರರಿಗೆ ಮಾತ್ರ ಮಾರಾಟಕ್ಕೆ ಅವಕಾಶ ಮಾಡಿಕೊಡ ಬೇಕುಎಂದು ಅಗ್ರಹಿಸಿದರು.

ಮನವಿ ಪತ್ರವನ್ನು ನಗರಸಭೆ ಅಭಿಯಂತರ ಸುಭಾಷ್‌ ಅವರಿಗೆ ನೀಡಲಾಯಿತು. ಕರವೇಪ್ರಧಾನಕಾರ್ಯದರ್ಶಿಪ್ರಭು, ರೈತ ಸಂಘದ ಅಧ್ಯಕ್ಷ,ಎ.ಎಂ.ಮಂಜುನಾಥ್‌ ಹಾಜರಿದ್ದರು.

ರಸ್ತೆ ದುರಸ್ತಿಗೆಕನ್ನಡ ಸೇನೆ ಆಗ್ರಹ :

Advertisement

ಚಿಕ್ಕಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಅನೇಕ ರಸ್ತೆಗಳು ಹದೆಗಟ್ಟಿದ್ದು, ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ಕೂಡಲೇ ರಸ್ತೆಗಳನ್ನು ಡಾಂಬರೀಕರಣ ಗೊಳಿಸುವಂತೆ ಆಗ್ರಹಿಸಿ ಕನ್ನಡ ‌ ಸೇನೆಯ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಅಮರೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್‌ ಮಾತನಾಡಿ, ಚಿಕ್ಕಬಳ್ಳಾಪುರ ನಗರಸಭೆವ್ಯಾಪ್ತಿಯ 31 ವಾರ್ಡ್‌ಗಳ ಅನೇಕ ಕಡೆಗಳಲ್ಲಿ ರಸ್ತೆಗಳು ಹದೆಗಟ್ಟಿದ್ದು,ವಾರ್ಡ್‌ನನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಜೊತೆಗೆ ಅಪಘಾತಗಳು ಸಹ ಸಂಭವಿಸುತ್ತಿರುತ್ತವೆ. ಮುಖ್ಯವಾಗಿ ನಗರದ ನಂದಿ ರಸ್ತೆಯು ಸುಮಾರು ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದು, ಇದುವರೆಗೂ ಈ ರಸ್ತೆಯ ಡಾಂಬರೀಕರಣವಾಗಿರುವುದಿಲ್ಲ ಎಂದಿದ್ದಾರೆ. ನಗರದ ಗಂಗಮ್ಮ ಗುಡಿ ಹಾಗೂ ಅನೇಕ ವಾರ್ಡ್‌ಗಳ ಅಡ್ಡ ರಸ್ತೆಗಳಲ್ಲಿ ಕೆಲವು ಕಡೆಗಳಲ್ಲಿರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದು ಮತ್ತು ಇನ್ನೂ ಕೆಲವು ಯುಜಿಡಿ ಮ್ಯಾನ್‌

ಹೋಲ್‌ಗ‌ಳು ರಸ್ತೆಯಲ್ಲಿಯೇ ಎದ್ದು ಕಾಣುತ್ತಿವೆ. ಆದ್ದರಿಂದ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಹದೆಗಟ್ಟಿರುವ

ರಸ್ತೆಗಳನ್ನು ಕೂಡಲೇ ಡಾಂಬರೀಕರಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಅಭಿ ವೃದ್ಧಿಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸೇನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಸೇನೆಯವಾಹನಘಕಟದ ಜಿಲ್ಲಾಧ್ಯಕ್ಷಹರೀಶ್‌, ಉಪಾಧ್ಯಕ್ಷ ವಾಸು, ಚಿಕ್ಕಬಳ್ಳಾಪುರ ತಾಲೂಕುಉಪಾಧ್ಯಕ್ಷೆಮಂಜುಳಾದೇವಿ,ಜಿಲ್ಲಾ ಸಹಕಾರ್ಯದರ್ಶಿ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next