Advertisement

ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಶ್ರದ್ಧಾಂಜಲಿ

01:00 AM Feb 06, 2019 | Team Udayavani |

ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಕೇಂದ್ರದ ಮಾಜಿ ಸಚಿವ ದಿ| ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶದ ವತಿಯಿಂದ ಶ್ರದ್ಧಾಂಜಲಿ ಸಭೆ ಬಿಜೈ ಚರ್ಚ್‌ ಹಾಲ್‌ನಲ್ಲಿ ಮಂಗಳವಾರ ಜರಗಿತು.

Advertisement

ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ನುಡಿನಮನ ಸಲ್ಲಿಸಿ, ಜಾರ್ಜ್‌ ಅವರು ಮಂತ್ರಿ ಪದವಿ ಪಡೆದರೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಕಾರ್ಮಿಕರ ಪರವಾಗಿದ್ದ ಧೀಮಂತ ನಾಯಕ ಅವರು. ಅವರ ಆದರ್ಶಗಳನ್ನು ಇಂದಿನ ತಲೆಮಾರು ಪಾಲಿಸಬೇಕು ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಮಾತನಾಡಿ, ಸಮಾಜಸೇವೆಯೇ ತನ್ನ ಗುರಿ ಎಂಬ ಧ್ಯೇಯದೊಂದಿಗೆ ತನ್ನನ್ನು ಸಮಾಜಕ್ಕಾಗಿ ಅರ್ಪಿಸಿದ ಮಹಾನ್‌ ನೇತಾರ ಜಾರ್ಜ್‌ ಅವರು. ಅವರು ನಡೆದ ದಾರಿ ಎಲ್ಲರಿಗೂ ದಾರಿದೀಪವಾಗಲಿ ಎಂದರು.

ಜಾರ್ಜ್‌ ಅವರ ಸಹೋದರ ಮೈಕಲ್‌ ಫೆರ್ನಾಂಡಿಸ್‌, ಜಯ ಶ್ರೀಕೃಷ್ಣ ಸಮಿತಿ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಫೆಲಿಕ್ಸ್‌ ಡಿ’ಸೋಜಾ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ಧರ್ಮಕ್ಷೇತ್ರದ ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಜಾರ್ಜ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ರೊಲ್ಫಿ ಡಿ’ಸೋಜಾ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಸೆಲೆಸ್ತಿನ್‌ ಡಿ’ಸೋಜಾ ವಂದಿಸಿದರು.

Advertisement

ಪುತ್ಥಳಿ ನಿರ್ಮಾಣಕ್ಕೆ  ಪ್ರಯತ್ನ
ಸಭಾದ ವತಿಯಿಂದ ಸಿದ್ಧಪಡಿಸಲಾದ ಠರಾವನ್ನು ಕೆಥೋಲಿಕ್‌ ಸಭಾದ ಖಜಾಂಚಿ ವಿವಿಡ್‌ ಡಿ’ಸೋಜಾ ಓದಿದರು. ಬಳಿಕ  ಠರಾವನ್ನು ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾಗೆ ಹಸ್ತಾಂತರಿಸಲಾಯಿತು. ಬೇಡಿಕೆಯಂತೆ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಜಾರ್ಜ್‌ ಫೆರ್ನಾಂಡಿಸ್‌ ಹೆಸರಿಡುವುದು ಮತ್ತು ಬಿಜೈ ವೃತ್ತದಲ್ಲಿ ಅವರ ಪುತ್ಥಳಿ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಐವನ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next