Advertisement
ಈ ಮೊದಲು ವಿಧಾನಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ವಿಧಾನ ಮಂಡಲದ ಸಮಿತಿ ಯವರು ರಾಜ್ಯದ ವಿವಿಧೆಡೆ ಭೇಟಿ ನೀಡಿದಾಗ ಜವಾಬ್ದಾರಿ ಸ್ಥಾನ ದಲ್ಲಿರುವ ಅಧಿಕಾರಿಗಳು ಸ್ಥಳ ದಲ್ಲಿರದೆ, ಅವರಿಗೆ ಸರಿಯಾದ ವ್ಯವಸ್ಥೆಯಾಗದೆ ಆಡಳಿತ ವರ್ಗವನ್ನು ದೂಷಿಸುವಂತಾಗಿತ್ತು. ಹೀಗಾಗಿ ಇವರನ್ನೂ ಸೇರಿಸಿ ರಾಜ್ಯ ಸರಕಾರ ಮಾ.21ರಂದು ಪರಿಷ್ಕೃತ ಶಿಷ್ಟಾಚಾರ ಸುತ್ತೋಲೆ ಹೊರಡಿಸಿದೆ.
ಪರಿಷ್ಕೃತ ಶಿಷ್ಟಾಚಾರದ ಪ್ರಕಾರ, ವಿಧಾನ ಸಭಾಧ್ಯಕ್ಷರು, ಪರಿಷತ್ ಸಭಾಪತಿ ಹಾಗೂ ವಿಧಾನಮಂಡಲ ಸಮಿತಿಯವರು ಪ್ರವಾಸ ಕೈಗೊಂಡಾಗ ಜಿಲ್ಲಾಧಿಕಾರಿಯವರಿಂದ ನಿಯೋ ಜಿಸಲ್ಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು, ಇಲ್ಲವೇ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿ, ಬೀಳ್ಕೊಡಬೇಕು. ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್‌ಪಿ ಕೇಂದ್ರ ಸ್ಥಾನದಲ್ಲಿದ್ದಾಗ ಅವರನ್ನು ಭೇಟಿ ಯಾಗಬೇಕು. ಜಿಲ್ಲಾ ಕೇಂದ್ರ ಸ್ಥಾನ ಹೊರತುಪಡಿಸಿ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್‌ಪಿ ವಿಶೇಷ ಪ್ರವಾಸ ಕೈಗೊಂಡು ಗಣ್ಯರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಗಣ್ಯರು ಬರುವ ಮೊದಲು ನಿಗದಿ ಯಾಗಿದ್ದ ಕಾರ್ಯಕ್ರಮಗಳನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳು ಮೊಟಕುಗೊಳಿಸಿ ಅವರನ್ನು ಭೇಟಿಯಾಗುವ ಅಗತ್ಯವಿಲ್ಲ. ಆದರೆ ಪ್ರವಾಸದ ಬಗ್ಗೆ ಸಾಕಷ್ಟು ಮುಂಚಿತವಾಗಿ ತಿಳಿಸಿದಾಗ ಹಾಜರಿರಬೇಕು.
Related Articles
Advertisement
ಅಧಿಕಾರಿಗಳಿಂದಲೇ ಉಲ್ಲಂಘನೆ?ಶಿಷ್ಟಾಚಾರ ಪ್ರಕಾರ ಗಣ್ಯರು ಬಂದಾಗ ಇಲಾಖಾ ಮುಖ್ಯಸ್ಥರು ಇಲ್ಲವೇ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಅನಗತ್ಯ ವಾಗಿ ತಮ್ಮ ಅಧೀನ ಅಧಿಕಾರಿ, ಸಿಬಂದಿಯನ್ನು ಕರೆದುಕೊಂಡು ಹೋಗುವಂತಿಲ್ಲ. ವಾಹನಗಳ ಮಿತ ಬಳಕೆ ದೃಷ್ಟಿಯಿಂದ ವಾಹನ ಸಾಮರ್ಥ್ಯಕ್ಕನುಗುಣವಾಗಿ ಐದಾರು ಇಲಾಖೆ ಅಧಿಕಾರಿಗಳು ಒಂದೇ ವಾಹನ ದಲ್ಲಿ ಪ್ರವಾಸ ಮಾಡಬೇಕು. ಆದರೆ ಗಣ್ಯರು ಬಂದಾಗ ಇಲಾಖಾಧಿಕಾರಿಗಳು ತಮ್ಮ ಅಧೀನ ಅಧಿಕಾರಿ, ಸಿಬಂದಿಯನ್ನು ಕರೆದು ಕೊಂಡು ಹೋಗುವುದು, ಪ್ರತಿಯೊಬ್ಬ ಅಧಿಕಾರಿ ತಮ್ಮದೇ ಪ್ರತ್ಯೇಕ ವಾಹನದಲ್ಲಿ ಓಡಾಡು ವುದು ನಡೆಯುತ್ತಲೇ ಇದೆ. ಇದು ಅಧಿಕಾರಿಗಳಿಂದ ಆಗುತ್ತಿರುವ ಶಿಷ್ಟಾಚಾರ ಉಲ್ಲಂಘನೆಗೆ ನಿದರ್ಶನವಾಗಿದೆ.