ಬದಿಯಡ್ಕ: ಕಾಸರಗೋಡು ಸಹಿತ ಕರಾವಳಿ ಕರ್ನಾಟಕದ ವೈಶಿಷ್ಟéಪೂರ್ಣ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾ ನದ ಐತಿಹಾಸಿಕ ಜಾಂಬ್ರಿ ಮಹೋತ್ಸವದ ಪೂರ್ವಭಾವಿಯಾಗಿ ಗುರುವಾರ ವಿವಿಧ ವೈದಿಕ ಕಾರ್ಯ ಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಗುರುವಾರ ಬೆಳಗ್ಗೆ ಶುದ್ಧಿ ಕಲಶ ತಂತ್ರಿವರ್ಯ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿಗಳಿಂದ ನೆರವೇರಿತು. ಬಳಿಕ ಶುಕ್ರವಾರದಿಂದ ಆರಂಭಗೊಳ್ಳಲಿರುವ ಅತಿರುದ್ರ ಮಹಾಯಾಗದ ಋತ್ವಿಜರಾದ ಬ್ರಹ್ಮಶ್ರೀ ಪುರೋಹಿತ ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರನ್ನು ಪೂರ್ಣಕುಂಭ, ಮಂತ್ರಘೋಷಗಳೊಂದಿಗೆ ಸ್ವಾಗತಿಸಲಾಯಿತು.ಬಳಿಕ ಗುಳಿಗನ ಕೋಲ ನೆರವೇರಿತು.
ಕ್ಷೇತ್ರದ ಪ್ರಧಾನ ದ್ವಾರದಲ್ಲಿ ಹೊರೆಕಾಣಿಕೆ ಮೆರವಣಿಗೆಯನ್ನು ಮುತ್ತುಕೊಡೆ, ಚೆಂಡೆ ಸಹಿತ ವಾದ್ಯಘೋಷಗಳೊಂದಿಗೆ ಸ್ವಾಗತಿಸಲಾಯಿತು. ಉಗ್ರಾಣ ಮುಹೂರ್ತವನ್ನು ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಮೊಖೆ¤àಸರ ಆನೆಮಜಲು ವಿಷ್ಣು ಭಟ್ ಅವರು ತಂತ್ರಿವರ್ಯರ ನೇತೃತ್ವದಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಾಂಬ್ರಿ ವಿಶೇಷ ಗಂಜಿ ಸೇವೆಗೆ ಮಂಗಳೂರಿನ ಮಧು ಸಮೂಹ ಸಂಸ್ಥೆಗಳ ಮಧು ಸೂದನ ಆಯರ್ ಮತ್ತು ಕುಳದಪಾರೆ ಸೀತಾರಾಮ ಹಾಗೂ ಕುಟುಂಬಸ್ಥರು ಕೊಡುಗೆ ನೀಡಿದ 2 ಸಾವಿರ ಕಿಲೋ ಅಕ್ಕಿಯನ್ನು ಕ್ಷೇತ್ರಕ್ಕೆ ಹಸ್ತಾಂತರಿಸಲಾಯಿತು. ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ರವೀಶ ತಂತ್ರಿ, ನೆಟ್ಟಣಿಗೆ ಶ್ರೀ ಕ್ಷೇತ್ರದ ಆಡಳಿತ ಮೊಖೆ¤àಸರ ಎನ್. ದಾಮೋದರ ಮಣಿಯಾಣಿ ನಾಕೂರು, ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಬಿ. ಪ್ರಭಾಕರ ರಾವ್ ಬನದಗದ್ದೆ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೇರಿಕೆ, ಪ್ರಧಾನ ಕಾರ್ಯದರ್ಶಿ ಎಂ. ಜಯಕರ ನಾಕೂರು, ಕ್ಷೇತ್ರ ಆಡಳಿತ ಸಮಿತಿ ಸದಸ್ಯರಾದ ಎಚ್.ಶ್ರೀಧರ ಕೇಕುಣ್ಣಾಯ, ನ್ಯಾಯವಾದಿ ಪದ್ಮನಾಭ ಕುಳದಪಾರೆ, ಸುಬ್ರಹ್ಮಣ್ಯ ಭಟ್ ಸಸಿಹಿತ್ಲು, ಗಿರೀಶ್ ನಾಯ್ಕ ಸರೋಳಿಮೂಲೆ, ಅರ್ಚಕ ರಾಮಪ್ರಸಾದ್ ಕೇಕುಣ್ಣಾಯ, ಆಹಾರ ಸಮಿತಿ ಅಧ್ಯಕ್ಷ ಪ್ರಶಾಂತ್ ಭಟ್ ಮುಳ್ಳಂಕೊಚ್ಚಿ, ಸ್ವಯಂಸೇವಕ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ ಬಜ, ವೈದಿಕ ಸಮಿತಿ ಅಧ್ಯಕ್ಷ ರಾಜಗೋಪಾಲ ಭಟ್ ಬೆಳೇರಿ, ಲಂಬೋದರ ರೈ, ಚೇತನ್, ಶಿವಪ್ರಸಾದ್, ಕಿಶನ್, ನವೀನ್, ಶ್ರೀಕಾಂತ್ ನೆಟ್ಟಣಿಗೆ, ಮಾಧವ ನೆಟ್ಟಣಿಗೆ ಸಹಿತ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಗಣಪತಿ ಹೋಮ ನೆರವೇರಿತು. ಭೋಜನ ಶಾಲೆಯಲ್ಲಿ ಪ್ರಾರ್ಥನೆ, ಅಗ್ನಿಸ್ಪರ್ಶವನ್ನು ತಂತ್ರಿವರ್ಯರು ನೆರವೇರಿಸಿದರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನೆರವೇರಿತು. ರಾತ್ರಿ ಶ್ರೀದೇವರ ಮಹಾ ಪೂಜೆಯ ಬಳಿಕ ಕುಂಜತ್ತೋಡಿ ಚೆರ್ವತ್ತೂರು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ಅನ್ನದಾನ ನಡೆಯಿತು.
ಅಪರಾಹ್ನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯನ್ನು ಜೀರ್ಣೋದ್ದಾರ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕುಂಜತ್ತೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಜಾಂಬ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಎಂ. ಮಾಧವ ನೆಟ್ಟಣಿಗೆ, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಂ. ಅತಿರುದ್ರ ಮಹಾಯಾಗ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೇರಿಕೆ ಉಪಸ್ಥಿತರಿದ್ದರು. ಚಂದ್ರಶೇಖರ ರೈ ಮುಂಡಾಸು ಸ್ವಾಗತಿಸಿ, ಶಿವಪ್ಪ ನಾಯ್ಕ ಕೈಪಂಗಳ ವಂದಿಸಿದರು.