Advertisement

ಸಾರಿಗೆ ನೌಕರರ ಕುಟುಂಬಸ್ಥರ ಪ್ರತಿಭಟನೆ

12:51 PM Apr 13, 2021 | Team Udayavani |

ಕಲಬುರಗಿ: ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಅನ್ವಯ ಸಂಬಳ ಜಾರಿಮಾಡಬೇಕು ಎಂದು ಒತ್ತಾಯಿಸಿ ಮುಷ್ಕರದಲ್ಲಿ ತೊಡಗಿರುವ ನೌಕರರನ್ನು ವರ್ಗಾವಣೆಮಾಡಿರುವುದನ್ನು ವಿರೋಧಿಸಿ ಕುಟುಂಬ ವರ್ಗದವರು ಸೋಮವಾರ ನಗರದ ಈಶಾನ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಪೋ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Advertisement

ರಾಜ್ಯಾದ್ಯಂತ ನಡೆಸುತ್ತಿರುವ ಸಾರಿಗೆ ನೌಕರರು ಮುಷ್ಕರ ಸೋಮವಾರ ಆರು ದಿನಪೂರೈಸಿದೆ. ಕಳೆದ ಎರಡು ದಿನಗಳ ಹಿಂದೆಮುಷ್ಕರದಲ್ಲಿ ತೊಡಗಿರುವ 45 ಸಿಬ್ಬಂದಿಯನ್ನುಸೇವೆಯಿಂದ ವಜಾ ಮತ್ತು 75 ಜನ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ ಈಶಾನ್ಯ ಸಾರಿಗೆ ಸಂಸ್ಥೆ ಆದೇಶಿಸಿದೆ. ಸಂಸ್ಥೆಯ ಈಕ್ರಮ ನೌಕರರು ಮತ್ತು ಕುಟುಂಬ ಸದಸ್ಯರಲ್ಲಿ ಅಸಮಾಧಾನ ಭುಗಿಲೇಳು ಕಾರಣವಾಗಿದೆ. ಇಲ್ಲಿನ ಕೇಂದ್ರ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ಡಿಪೋ ಮತ್ತು ಶಾಂತಿ ನಗರ, ವಿದ್ಯಾನಗರದಲ್ಲಿರುವ ಡಿಪೋಗಳ ಮುಂದೆ ಜಮಾವಣೆಗೊಂಡ ನೌಕರರ ಕುಟುಂಬದವರು ಮತ್ತು ಮಕ್ಕಳು, ನೌಕರರ ಮುಷ್ಕರವು ರಾಜ್ಯ ಮಟ್ಟಾಗಿದೆ. ಆದರೆ, ಕೆಲವೇ ಕೆಲ ನೌಕರರನ್ನು ಈಶಾನ್ಯ ರಸ್ತೆ ಸಾರಿಗೆಯ ಅಧಿಕಾರಿಗಳುಗುರಿಯಾಗಿಸಿಕೊಂಡು ಏಕಾಏಕಿ ವರ್ಗಾವಣೆಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ಹೊರಹಾಕಿದರು.

ಎಲ್ಲೆಡೆ ಹೋರಾಟ ನಡೆಯುತ್ತಿದ್ದಾಗ ನೌಕರರಿಗೆ ವೈಯಕ್ತಿಕವಾಗಿ ಯಾವ ನಿರ್ಧಾರತೆಗೆದುಕೊಳ್ಳಲು ಬರುವುದಿಲ್ಲ. ಇದು ಗೊತ್ತಿದ್ದರೂಅಧಿಕಾರಿಗಳು ಉದ್ದೇಶಪೂರ್ವಕವಾಗಿ ನೌಕರರನ್ನು ಬೇರೆ-ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲಾಗಿದೆ. ದಿಢೀರನೆವರ್ಗಾವಣೆ ಮಾಡಿದರೆ ಕುಟುಂಬ ಸಮೇತ ವರ್ಗವಣೆಯಾದ ಸ್ಥಳಕ್ಕೆ ಹೋಗುವುದಾದರೂ ಹೇಗೆ ಎಂದು ಮಹಿಳೆಯರು ಆಳಲು ತೋಡಿಕೊಂಡರು. ಮೇಲಾಗಿ ನೌಕರರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ. ಈಗ ಕಳೆದೊಂದು ತಿಂಗಳಿಂದ ಸಂಬಳ ಬಿಡುಗಡೆಮಾಡಿಲ್ಲ. ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ವೇತನ ಪರಿಷ್ಕರಣೆ ಮಾಡಲೇಬೇಕು. ಮುಷ್ಕರ ನಿತರರ ಬೇಡಿಕೆಈಡೇರಿಸಬೇಕೆಂದು ಪ್ರತಿಭಟನಾನಿರತ ಮಹಿಳೆಯರು ಆಗ್ರಹಿಸಿದರು.

ಬಸ್‌ ಸಂಚಾರಕ್ಕೆ ತಡೆ: ಕೇಂದ್ರ ಬಸ್‌ ನಿಲ್ದಾಣದಿಂದ ಹೈದರಾಬಾದ್‌ಗೆ ಹೊರಟಿದ್ದಸಾರಿಗೆ ಬಸ್‌ವೊಂದನ್ನು ಮಹಿಳೆಯರು ಬಸ್‌ ನಿಲ್ದಾಣದಲ್ಲೇ ತಡೆದು ಸಿಟ್ಟು ಹೊರಹಾಕಿದರು. ಮುಷ್ಕರದ ನಡುವೆಯೂ ಬಸ್‌ಚಲಾಯಿಸುವುದು ಸರಿಯಲ್ಲ ಎಂದು ಆಕ್ಷೇಪವ್ಯಕ್ತಪಡಿಸಿದ ಮಹಿಳೆಯರು, ಬಸ್‌ನಿಂದಚಾಲಕನನ್ನು ಕೆಳಗಡೆ ಇಳಿಸಿದರು. ಅಲ್ಲದೇ,ಬಸ್‌ ಒಳಗೆ ಹೋಗಿ, ಬಸ್‌ನಲ್ಲಿದ್ದ ಜನರನ್ನೂ ಕೆಳಗಿಳಿಸಿದರು. ನಮಗೆ ಅನ್ಯಾಯವಾಗಿದೆ. ನಮಗೆ ನ್ಯಾಯ ಸಿಗುವವರೆಗೆ ಬಸ್‌ ಓಡಿಸಲುಬಿಡುವುದಿಲ್ಲ. ಬಸ್‌ನಿಂದ ಇಳಿಯಿರಿ ಎಂದು ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next