Advertisement

ಬಗರ್‌ಹುಕುಂ ಸಾಗುವಳಿ ಹಕ್ಕು ಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

03:39 PM Feb 04, 2022 | Shwetha M |

ವಿಜಯಪುರ: ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿ ಅಕ್ರಮ ಸಕ್ರಮಗೊಳಿಸಿ, ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌)ದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ರಾಜ್ಯದಲ್ಲಿ ಭೂಹೀನರು ಗೋಮಾಳ, ಗೈರಾಣು, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಮುಂತಾದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಅದರಲ್ಲಿ ಹಾಲಿ ಸಾಗುವಳಿ ನಿರತ ಬಡ ರೈತ ಹಾಗೂ ಕೃಷಿ ಕೂಲಿಕಾರರು ಮತ್ತು ಕಸುಬುದಾರರನ್ನು ರಾಜ್ಯ ಸರಕಾರ ಒಕ್ಕಲೆಬ್ಬಿಸಿ ಖಾಸಗಿ ಸಂಸ್ಥೆಗಳಿಗೆ ನೀಡುವ ದುರುದ್ದೇಶದ ನೀತಿ ರೂಪಿಸಲು ಮುಂದಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಇದಕ್ಕಾಗಿ ಸರ್ಕಾರ ಸಚಿವ ಸಂಪುಟದ ಉಪ ಸಮಿತಿ ರಚಿಸಿದ್ದು, ಭೂಹೀನರ ಪಾಲಿಗೆ ಶಾಪವಾಲಿರುವ ಇಂಥ ನಿರ್ಧಾರ ಸಮಂಜಸವಲ್ಲ. ಜಿಲ್ಲೆಯಲ್ಲಿ ಸರ್ಕಾರ ಅರಣ್ಯ, ಇನ್ನೀತರ ಭೂಮಿ ಸುಮಾರು ವರ್ಷದಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ 2018ರಲ್ಲಿ ಆದೇಶ ಮಾಡಿದ್ದು, ಫಾರ್ಮ್ ನಂ. 57 ತುಂಬಿದ್ದಾರೆ. ಆದರೆ ಈವರೆಗಗೂ ಅಕ್ರಮ ಸಕ್ರಮ ಮಾಡಿ ಹಕ್ಕುಪತ್ರ ನೀಡಿಲ್ಲ. ಕೆಲವು ಕಡೆ ಗಳಲ್ಲಿ ಸದರಿ ಕಾರ್ಯಕ್ಕೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಸಮಿತಿ ರಚಿಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ಭೂ ಸುಧಾರಣೆ ಕಾಯ್ದೆಯಂತೆ ಸುಮಾರು ವರ್ಷದಿಂದ ಸಾಗುವಳಿ ಮಾಡುತ್ತಿರುವ ದಲಿತರ ಹಿಂದುಳಿದ ಭೂ ಹೀನ ಬಡವರಿಗೆ ಹಕ್ಕುಪತ್ರ ಕೊಡಬೇಕು. ವಿಜಯಪುರ ತಾಲೂಕಿನ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಮದಬಾವಿ, ಹಡಗಲಿ, ಐನಾಪುರ, ಅಲಿಯಾಬಾದ, ಬುರಣಪುರ, ಭೂತ್ನಾಳ, ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಮನವಿ ಮಾಡಿದರು.

ಸುರೇಖಾ ರಜಪೂತ ಮಾತನಾಡಿ, ಬಲೇಶ್ವರ, ಸಿರಬೂರ, ಹೊಸುರ,ಜಂಬಗಿ, ಕಣಬೂರ, ಚಿಕ್ಕಗಲಗಲಿ ಸರ್ಕಾರ ಜಾರಿ ಸಾಗುವಳಿ ಮಾಡಿರುತ್ತಾರೆ. ತಿಕೋಟಾ, ಇಟ್ಟಂಗಿಹಾಳ, ಸಿದ್ದಾಪುರ, ಸೊಮದೇವರ ಹಟ್ಟಿ, ಇಂಡಿ ತಾಲೂಕಿನ ಸಾಗುವಳಿ ತಡಲಗಿ, ಇಂಚಗೇರಿ, ಬಬಲಾದಿ, ಬಸವನಬಾಗೇವಾಡಿ, ಬೇವನೂರ ಗ್ರಾಮದ ಕಂದಾಯ ಇದ್ದಿದ್ದು ಅರಣ್ಯ ಮಾಡಿ ಸರ್ಕಾರ ಇದನ್ನು ರದ್ದು ಪಡಿಸಿ ಕಂದಾಯ ಭೂಮಿ ಮಾಡಿದ್ದಾರೆ ಕೆಲವು ತಾಲೂಕಿನಲ್ಲಿ ತಹಶೀಲ್ದಾರ್‌ರು ಸರ್ವೇ ಮಾಡಿರುವುದಿಲ್ಲ, ತಕ್ಷಣ ತಾಲೂಕಿಗಳಿಗೆ ಭೇಟಿ ನೀಡಿ ಸರ್ವೇ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಪರಶುರಾಮ ಮಂಟೂರ, ಬಸವರಾಜ ಗುಡಿಮನಿ ಮಾತನಾಡಿದರು. ಶರಣಗೌಡ ಬಿರಾದಾರ, ಸಿದ್ರಾಮ ತಳಕೇರಿ, ಸುಭಾಷ್‌ ತಳಕೇರಿ, ಮಲ್ಲಪ್ಪ ಕಲಾದಗಿ, ಸಂತೋಷ ಕಲಾದಗಿ, ಲಕ್ಷ್ಮಣ ನಡುವಿನಕೇರಿ, ಬಸಪ್ಪ ಅಲಿಯಾಬಾದ, ಯಲ್ಲಪ್ಪ ಅಲಿಯಾಬಾದ, ಬಸಪ್ಪ ಮಾದರ, ಪುಂಡಲೀಕ ತಳಕೇರಿ, ಯಮನಪ್ಪ ಪೂಜಾರಿ, ಲಾಲಸಾಬ ಮ್ಯಾಗೇರಿ, ಮಹಾದೇವಿ ತಳಕೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next