ವಾಡಿ: ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನಿಸಿದ ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರವಿವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಕುಂದನೂರ ಚೌಕ್‌ದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ ಸಿಂಹ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವೀರಣ್ಣಗೌಡ ಪರಸರೆಡ್ಡಿ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಅವಹೇಳನಕಾರಿ ಹೇಳಿಕೆ ನೀಡುವ ಚಾಳಿಯನ್ನು ಬಿಜೆಪಿಯವರು ಬೆಳೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ಚಂದ್ರಸೇನ ಮೇನಗಾರ, ಜುಮ್ಮಣ್ಣ ಪೂಜಾರಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಪ್ರಜಾಪ್ರಭುತ್ವದ ಆಶಯದಂತೆ ಜನಪರವಾದ ವಿರೋಧ ಪಕ್ಷದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಹಗರಣಗಳನ್ನು ದಾಖಲೆ ಸಮೇತ ಜನರ ಮುಂದಿಡುತ್ತಿದ್ದಾರೆ. ಇದು ಆಡಳಿತದಲ್ಲಿರುವ ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ವೈಯಕ್ತಿಕ ಟೀಕೆ ಮಾಡಿ ಪ್ರಿಯಾಂಕ್ ವ್ಯಕ್ತಿತ್ವ ಕುಗ್ಗಿಸುವ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ್, ಮುಖಂಡರಾದ ಟೋಪಣ್ಣ ಕೋಮಟೆ, ಮುಕ್ರುಂ ಪಟೇಲ, ದೇವಿಂದ್ರ ಕರದಳ್ಳಿ, ವಿಶಾಲ ನಂದೂರಕರ, ಬಸವರಾಜ ಕಾಟಮಳ್ಳಿ, ಬಸವರಾಜ ಕೇಶ್ವಾರ, ಸೂರ್ಯಕಾಂತ ರದ್ದೇವಾಡಿ, ನಾಗೇಂದ್ರ ಜೈಗಂಗಾ, ಅಬ್ರಾಹಂ ರಾಜಣ್ಣ, ಶರಣಬಸು ಸಿರೂರಕರ, ಶ್ರವಣಕುಮಾರ ಮೊಸಲಗಿ, ಮಲ್ಲಯ್ಯ ಗುತ್ತೇದಾರ, ಚಂದಪ್ಪ ಕಟ್ಟಿಮನಿ, ರಾಹುಲ್ ಮೇನಗಾರ, ಚಂದ್ರಶೇಖರ ದನ್ನೇಕರ, ಅಶ್ರಫ್ ಖಾನ್, ತುಕಾರಾಮ ರಾಠೊಡ, ಮಲ್ಲಿಕಾರ್ಜುನ ಸೈದಾಪುರ, ರಮೇಶ ಬಡಿಗೇರ, ಭಶೀರ್ ಖುರೇಶಿ, ಸಾಲೋಮನ್ ರಾಜಣ್ಣ, ಸಿದ್ಧು ಪೂಜಾರಿ, ರಾಘವೇಂದ್ರ ಅಲ್ಲಿಪುರ, ಅಲ್ತಾಫ್ ಸೌದಾಗರ, ಯಶ್ವಂತ ಧನ್ನೇಕರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.