Advertisement

ರಸ್ತೆ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

12:16 PM Nov 22, 2019 | Suhan S |

ರೋಣ: ಪಟ್ಟಣದ ಸರ್ಕಾರಿ ಪ.ಪೂ ಕಾಲೇಜಿಗೆ ಹೋಗಲು ವ್ಯವಸ್ಥಿತ ರಸ್ತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ ಜೆ.ಟಿ. ಕೊಪ್ಪದ ಅವರಿಗೆ ಮನವಿ ಸಲ್ಲಿಸಿದರು.

Advertisement

ವಿದ್ಯಾರ್ಥಿನಿ ಹನಮವ್ವ ಕಡಿವಾಲ ಮಾತನಾಡಿ, ಗ್ರಾಮೀಣ ಬಡ ಮಕ್ಕಳ ಅನುಕೂಲಕ್ಕಾಗಿ 1981ರಲ್ಲಿ ರಾಜ್ಯ ಸರ್ಕಾರ ಪ.ಪೂ ಕಾಲೇಜು ಪ್ರಾರಂಭಿಸಿದೆ. ಅಲ್ಲಿಂದ ಸತತ 28 ವರ್ಷಗಳ ಕಾಲ ಸರ್ಕಾರಿ ನಿಯಮಕ್ಕಿಂತ ಹೆಚ್ಚು ಮಕ್ಕಳು ಪ್ರತಿ ವರ್ಷ ಇಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಈ ಕಾಲೇಜಿಗೆ ತೆರಳುವ ರಸ್ತೆ ಮಾರ್ಗವನ್ನು ವಿ.ಎಫ್‌. ಪಾಟೀಲ ಪ್ರೌಢಶಾಲೆ

ಆಡಳಿತ ಮಂಡಳಿಯವರು ಬೇಲಿ ಹಾಕಿ ಬಂದ್‌ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಆದ್ದರಿಂದ ಈ ಸಮಸ್ಯೆಯನ್ನು ಶೀಘ್ರವಾಗಿ ಶಿಕ್ಷಣ ಇಲಾಖೆ ಅಧಿ ಕಾರಿಗಳು ಬಗೆಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ವಿದ್ಯಾರ್ಥಿ ಸಂತೋಷ ಮಲ್ಲಾಪುರ ಮಾತನಾಡಿ, ಕಾಲೇಜಿಗೆ ತೆರಳುವ ರಸ್ತೆ ಗುರುತಿಸಿ ಅನುಕೂಲ ಕಲ್ಪಿಸಬೇಕು. ತಡ ಮಾಡಿದ್ದಲ್ಲಿ ತರಗತಿ ಬಹಿಷ್ಕರಿಸಿ ರಸ್ತೆಗಿಳಿದು ಹೋರಾಟ ಮಾಡುತ್ತೇವೆ. ಅದಕ್ಕಿಂತ ಮೊದಲು ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

Advertisement

ನಂತರ ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ ಜೆ.ಟಿ. ಕೊಪ್ಪದ , ಮನವಿ ಪತ್ರ ಕೂಡಲೇ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಿ ರಸ್ತೆ ಕುರಿತು ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ರುಕ್ಮಿಣಿ ಹುಸಲಕೋಪ, ಅಶ್ವಿ‌ನಿ ಯರಗೊಪ್ಪ, ಪವಿತ್ರಾ ಸಿದ್ದೊಗಿ, ಕವಿತಾ ಹೊಸಳ್ಳಿ, ಜ್ಯೋತಿ ಬಳಿಗಾರ, ಅಶ್ವಿ‌ನಿ ಮಾಳಗಿ, ಹನಮಂತ ದೊಡ್ಡಮನಿ, ಶಿವಾಜಿ ಬಿದರಿ, ಆಸೀಫ್‌ ಯಲಿಗಾರ, ಸಹಜಾನಂದ ಮುಗಳಿ, ನವೀನ ತಮಿನಾಳ, ರವಿಚಂದ್ರ ಬೇವಿನಕಟ್ಟಿ, ಮಹಾಂತೇಶ ಪೂಜಾರ, ಶಿವು ಮಾದರ, ವಿನಾಯಕ ಜಕ್ಕಲ್ಲಿ, ಚೇತನ ಯಂಡಿಗೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next