Advertisement

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

11:55 AM Mar 29, 2022 | Team Udayavani |

ಧಾರವಾಡ: ಎಐಯುಟಿಯುಸಿ ಸೇರಿದಂತೆ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಶನ್‌ಗಳಿಂದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಭುವನ ಬಳ್ಳಾರಿ ಮಾತನಾಡಿ, ಕೋವಿಡ್‌ ಸಂಕಷ್ಟದಲ್ಲಿ ಕೇಂದ್ರ ಸರ್ಕಾರವು ಕರಾಳ ಮಸೂದೆಗಳು, ಸುಗ್ರೀವಾಜ್ಞೆಗಳು ಮತ್ತು ನೀತಿಗಳ, ಕಾರ್ಮಿಕರ ಹೋರಾಟಗಳ ಮೂಲಕ ಗಳಿಸಿರುವ ಹಲವಾರು ಹಕ್ಕುಗಳನ್ನು ಕಿತ್ತುಕೊಂಡಿವೆ. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ನೌಕರರು ಮತ್ತು ಸ್ಕೀಮ್‌ ವರ್ಕರ್‌ಗಳು, ದಿನಗೂಲಿ ನೌಕರರ ಜೀವನ ತೀವ್ರ ಸಂಕಷ್ಟದಲ್ಲಿದೆ ಎಂದರು.

ಕಾರ್ಮಿಕರ ಡೌನ್‌ ಸೈಜಿಂಗ್‌, ಲಕ್ಷಾಂತರ ಕಾರ್ಖಾನೆ ಮತ್ತು ಕಂಪನಿಗಳಿಗೆ ಬೀಗ ಜಡಿದ, ಉದ್ಯೋಗ ಕಡಿತದಲ್ಲಿ ಹೆಚ್ಚಳ, ಸರ್ಕಾರದ ಇಲಾಖೆಗಳು ಮತ್ತು ಉದ್ದಿಮೆಗಳಲ್ಲಿ ಹೊಸ ನೇಮಕಾತಿಗಳಲ್ಲಿ ತಡೆಯಾಜ್ಞೆ, ಅವಧಿಗೆ ಮುಂಚೆಯೇ ಒತ್ತಾಯದ ನಿವೃತ್ತಿ, ಇತ್ಯಾದಿ ಕಾರಣಗಳಿಂದ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಈ ಅಸಮಾನತೆ ವಿರುದ್ಧ, ಶೋಷಕ ವ್ಯವಸ್ಥೆ ಕಿತ್ತೂಗೆದು ಸಮಾಜವಾದಿ ಸಮಾಜ ಕಟ್ಟಲು ಎಲ್ಲಾ ಕಾರ್ಮಿಕರು ಸಜ್ಜಾಗಬೇಕು ಎಂದರು. ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ನಿಂಗಮ್ಮ ಹುಡೆದು, ಸವಿತಾ ಜಾದವ್‌, ಚಾಂದಬಿ ಹೊಸಟ್ಟಿ, ಸುನಂದ ಹೊಂಗಲ್‌, ಸುನಿತಾ ಚವನ್‌, ರೇಣುಕಾ ಹೊಂಗಲ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next