Advertisement
ಜಿಲ್ಲಾ ಔಷಧ ಉಗ್ರಾಣದಿಂದ ಕಾಲ್ನಡಿಗೆ ಮೂಲಕ ಆಗಮಿಸಿ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ, ಅಖೀಲ ಭಾರತೀಯ ತಾಂತ್ರಿಕ ಪರಿಷತ್ತಿನಿಂದ 1987 ರಲ್ಲಿ ಫಾರ್ಮಸಿಯನ್ನು ತಾಂತ್ರಿಕ ವಿದ್ಯಾರ್ಹತೆಯೆಂದು ಪರಿಗಣಿಸಿ ಆದೇಶಿಸಿರುವುದರಿಂದ ಡಿಪ್ಲೋಮಾ ವೇತನ ಭತ್ಯೆ ನೀಡುವುದು, ಕೇಂದ್ರ ಹಾಗೂ ನೆರೆ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್‌ಗಳಿಗಿಂತ ಕಡಿಮೆ ವೇತನ ಹಾಗೂ ಭತ್ಯೆಯನ್ನು 1982 ರಿಂದ ಪಡೆಯುತ್ತಲಿದ್ದು ಈ ಅನ್ಯಾಯವನ್ನು ಸರಿಪಡಿಸುವುದು, ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ 10 ವರ್ಷಗಳ ಕಾಲಮಿತಿ ವೇತನ ಮುಂಬಡ್ತಿ ಪಡೆದ ನಂತರ ಯಾವುದೇ ವೇತನ ಶ್ರೇಣಿ ಬದಲಾವಣೆ ಆಗದೆ ಇರುವುದರಿಂದ ಕರ್ನಾಟಕ ಆಡಳಿತ ನ್ಯಾಯಮಂಡಳಿ ತೀರ್ಪಿನಂತೆ ವೇತನ ಜಾರಿ ಮಾಡುವುದು, ಜನಸಂಖ್ಯೆ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯದ ಮೇರೆಗೆ ಹೆಚ್ಚಿನ ಹುದ್ದೆ ಸೃಜಿಸುವುದು, 1965 ರ ವೃಂದ ಮತ್ತು ನೇಮಕಾತಿಯನ್ನು ಈಗೀರುವ ವಿದ್ಯಾರ್ಹತೆಗೆ ಅನುಗುಣವಾಗಿ ಬದಲಾಯಿಸಿ ಬಡ್ತಿ ಅವಕಾಶ ಹೆಚ್ಚಿಸುವುದು, ಸೇವಾ ನಿರತ ಫಾರ್ಮಸಿಸ್ಟ್‌ಗಳಿಗೆ ಉನ್ನತ ವ್ಯಾಸಂಗಕ್ಕೆ ಸೀಟು ಕಾಯ್ದಿರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು, ಕಾಲಕಾಲಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಔಷಧಿಗಳ ಕುರಿತು ತಿಳಿದುಕೊಳ್ಳಲು ಪುನರ್ ಮನನ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಎಂದು ಮನವಿ ಮಾಡಲಾಯಿತು.
Advertisement
ಸರ್ಕಾರಿ ಔಷಧ ವಿತರಕರ ಪ್ರತಿಭಟನೆ
05:46 PM Jan 03, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.