Advertisement
ಸೋಮವಾರ ಪಟ್ಟಣದ ಬಸವ ಮಂಟಪದಿಂದ ಸಾರಿಗೆ ನೌಕರರು, ನೌಕರರ ಕುಟುಂಬದ ಸದಸ್ಯರುಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರುತಟ್ಟೆ ಲೋಟ ಬಾರಿಸುತ್ತಾ ತಹಶೀಲ್ದಾರ್‌ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಸರ್ಕಾರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಸಾರಿಗೆ ನೌಕರರ ಕುಟುಂಬಸ್ಥೆ ಬಸಮ್ಮ ಮುರಡಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಿರ್ವಹಣೆ ಬದಿಗೊತ್ತಿ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಕೆಲಸ ಮಾಡಿದರೂ ಸಹ ಅವರಮೇಲೆ ಕೇಸ್ ಹಾಕಲಾಗುತ್ತಿದೆ. ಸಂಬಳಹೆಚ್ಚಿಸುವಂತೆ ಮುಷ್ಕರ ನಡೆಸುತ್ತಿದ್ದರೇ, ಸರ್ಕಾರ ನೌಕರರ ಮೇಲೆ ಹೆದರಿಕೆ ಹಾಕುವುದು ಸರಿಯಲ್ಲ ಎಂದು ಆರೋಪಿಸಿದರು.
ರೈತರ ಮುಖಂಡರಾದ ಬಸವರಾಜ ಪೈಲ, ರಸೂಲಸಾಬ ತಹಶೀಲ್ದಾರ್, ಸಾರಿಗೆ ನೌಕರರಾದಮಲ್ಲನಗೌಡ ದೇವರಡ್ಡಿ, ರಾಘವೇಂದ್ರತಾಳಿಕೋಟಿ, ಸುರೇಶ ಜಗ್ಗಲ, ಎಸ್.ವಿ.ಹಾದಿಮನಿ, ಜಿ.ಎಸ್.ಪಾಟೀಲ, ಕೆ.ಐ.ಸಜ್ಜನ,ಎಸ್.ಎಸ್. ಕೆಸರಬಾವಿ, ಎಸ್.ಆರ್. ಗೌಡರ,ಎ.ಎಸ್. ಗಡ್ಡಿ, ಎನ್.ಎಸ್. ನಾಗರಾಳ, ಮುನುಜಾ ಖಾಜಿ, ನೌಕರರ ಕುಟುಂಬಸ್ಥರಾದನಿರ್ಮಲ ಗೌಡರ, ವಿಜಯಲಕ್ಷ್ಮೀ ಪಲ್ಲೇದ,ರೇಣುಕಾ ನಾಗರಾಳ, ಮಹಾದೇವಿ ಗೌಡರ,ಶರಣಮ್ಮ ಗೌಡರ, ಸಂಗೀತಾ ಹೊಸೂರ,ಲಕ್ಷ್ಮೀ ದೇವರಡ್ಡಿ, ಶೋಭಾ ನಾಗರಾಳ,ಸುವರ್ಣ ತಾಳಿಕೋಟಿ, ಲಕ್ಷ್ಮಿಬಾಯಿ ಕಟ್ಟಿಮನಿ,ಶಾಂತಮ್ಮ ಮಾನಬಾವಿ, ಚಂದ್ರಕಲಾ ಐಹೊಳೆ ಇದ್ದರು.