Advertisement

ರೈತ ಸಂಘದಿಂದ ಹೆದ್ದಾರಿ ತಡೆದು ಪ್ರತಿಭಟನೆ

11:58 AM Sep 29, 2020 | Suhan S |

ಕುದೂರು: ಖಾಸಗಿ ಕಂಪನಿಗಳಿಗೆ ರೈತರ ಜಮೀನು ಮಾರಾಟ ಮಾಡುವ ವ್ಯವಸ್ಥಿತ ಹುನ್ನಾರವನ್ನು ಸರ್ಕಾರ ರೂಪಿಸಿದೆ ಎಂದು ಮಾಗಡಿ ತಾಲೂಕುಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಆರೋಪಿದರು.

Advertisement

ರಾಷ್ಟ್ರೀಯ ಹೆದ್ದಾರಿ 75ರ ಮರೂರು ಹ್ಯಾಂಡ್‌ಪೊಸ್ಟ್‌ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ಪದಾಧಿಕಾರಿಗಳು ಕರ್ನಾಟಕ ಬಂದ್‌ ನಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆಯನ್ನು ಲೆಕ್ಕಿಸದೆ ಮಸೂದೆಯನ್ನುಪಾಸ್‌ಮಾಡಿರುವುದು ನಿಜಕ್ಕೂ ನಮಗೆ ಆಘಾತವಾಗಿದೆ. ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆಕಿಡಿಕಾರಿದರು. ಕುದೂರು ಹೋಬಳಿ ಘಟಕದ ಅಧ್ಯಕ್ಷ ಖಜಿಪಾಳ್ಯ ಮಂಜುನಾಥ್‌, ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್‌,ಹೋಬಳಿಘಟಕದ ಗೌರವಾಧ್ಯಕ್ಷ ವಿಶ್ವನಾಥರಾವ್‌, ರಿಜ್ವಾನ್‌ಬೆಟ್ಟಹಳ್ಳಿ ಗ್ರಾಮಘಟಕದ ಅಧ್ಯಕ್ಷ  ಚಂದ್ರಶೇಖರ್‌, ರಾಜಣ್ಣ, ಬೈಲಪ್ಪ, ನಂಜುಂಡಪ್ಪ, ಮಂಜುನಾಥ್‌, ಕೆಂಪಾಪುರ ಮೋಹನ್‌,ಮಂಜುನಾಥ್‌, ಕೃಷ್ಣಪ್ಪ, ಗಂಗರಾಜು ಮತ್ತಿತರರು ಹಾಜರಿದ್ದರು.

 

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ :

Advertisement

ಕನಕಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ದ ಸಿಡಿದೆದ್ದಿದ ರೈತರು ಹಾರೋಹಳ್ಳಿಯಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ರಾಜ್ಯರೈತ ಸಂಘ ಹಾಗೂ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್‌ಗೆ ಹೋಬಳಿಯ ಒಕ್ಕಲಿಗರ ಜಾಗೃತಿ ಸಂಘ, ಹಸೀರು ಸೇನೆ ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ರಕ್ಷಾಣಾ ಸೇನೆ, ಮುಸ್ಲಿಂ ಯೂತ್‌ ಅಸೋಷಿಯೇಷನ್‌ ಸೇರಿದಂತೆ ನೂರಾರು ಪ್ರತಿಭಟನಾಕಾರರು ರೈತ ಸಂಘದ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಹಾರೋಹಳ್ಳಿಯ ಬಸ್‌ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಕಾನೂನು ಸಲಹೆಗಾರ ಚಂದ್ರಶೇಖರ್‌ ಮಾತನಾಡಿ, ಅನ್ನದಾತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ಕೇಂದ್ರ, ರಾಜ್ಯ ಸರ್ಕಾರಹಲವಾರು ವರ್ಷಗಳ ಹೋರಾಟದ ಮೂಲಕ ಜಾರಿಯಾಗಿದ್ದ ಭೂಸುಧಾರಣೆ ಕಾಯ್ದೆಯನ್ನು ಯಾವುದೇ ಚರ್ಚೆ ಇಲ್ಲದೆ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವುದು ಖಂಡನೀಯ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಶ್ಯಾಮ್‌, ಮುಸ್ಲಿಂ ಯೂತ್‌ ಅಧ್ಯಕ್ಷ ರೆಹಮತ್ತುಲ್ಲಾ,ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ರಾಜಾÂಧ್ಯಕ್ಷ ಆಂಜನಪ್ಪ, ಕಾಳರಾಜು, ಅಭಿಷೇಕ್‌,ರೈತ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next