Advertisement

ಪ್ರಿಯಾಂಕಾ ಬಂಧನ ಖಂಡಿಸಿ ಪ್ರತಿಭಟನೆ

09:48 AM Jul 21, 2019 | Team Udayavani |

ಧಾರವಾಡ: ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಂಧಿಸಿರುವ ಉತ್ತರ ಪ್ರದೇಶ ಸರಕಾರದ ಕ್ರಮ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ವಿವೇಕಾನಂದ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ಉತ್ತರ ಪ್ರದೇಶದ ಸೋಮಭದ್ರ ದತ್ತ ಜಿಲ್ಲೆಯ ಉಂಭಾಗ್ರಾಮದ ಘೋರವಾಲ್ ಎಂಬಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ 10 ಜನ ಮೃತಪಟ್ಟು, 28ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಕುರಿತು ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಪ್ರಿಯಾಂಕಾ ಅವರನ್ನು ಬಿಜೆಪಿ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಜಿಲ್ಲಾಡಳಿತದ ಮೂಲಕ ಬಂಧಿಸಿರುವ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.

144 ಕಲಂ ಜಾರಿ ಇರುವುದರಿಂದ ನಾಲ್ಕು ಜನಕ್ಕೆ ಈ ಪ್ರದೇಶದಲ್ಲಿ ಬಿಡಲು ಪ್ರಿಯಾಂಕಾ ಹೇಳಿದ್ದರು. ಆದರೆ ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಸ್ವಾಂತನ ಹೇಳಲು ಪ್ರಿಯಾಂಕಾ ಹೊರಟಾಗ ಅವರನ್ನು ಬಂಧಿಸಿರುವುದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿ ತೋರಿಸುತ್ತದೆ ಎಂದು ಆರೋಪಿಸಿದರು.

ರಾಣಿ ಚನ್ನಮ್ಮ ಬ್ಲಾಕ್‌ ಅಧ್ಯಕ್ಷ ಬಸವರಾಜ ಮಲಕಾರಿ, ಬಸಪ್ಪ ಕಿತ್ತೂರ, ಕೆಪಿಸಿಸಿ ಸದಸ್ಯರಾದ ರಾಬರ್ಟ್‌ ದದ್ದಾಪುರಿ, ಆನಂದ ಜಾಧವ, ಶರಣಪ್ಪ ಕೊಟಗಿ, ಅಲ್ತಾಫ್‌ ಹಳ್ಳೂರ, ಆನಂದ ಸಿಂಗನಾಥ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next