Advertisement

ಯುಜಿಡಿ ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ

06:02 PM Oct 19, 2019 | Suhan S |

ತಿಪಟೂರು: ನಗರದ ಗೊರಗೊಂಡನ ಹಳ್ಳಿಯಲ್ಲಿ ನಿರ್ಮಿಸುತ್ತಿರುವ ಯುಜಿಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ ಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಗೊರಗೊಂಡನಹಳ್ಳಿ ಕಾಲೋನಿ ನಿವಾಸಿ ಉಮೇಶ್‌ ಮಾತನಾಡಿ, ಯುಜಿಡಿ ಚೇಂಬರ್‌ ನಿರ್ಮಿಸಲು ಕಾಲೋನಿಯ ಮುಖ್ಯ ರಸ್ತೆಯ ಮುಂಭಾಗ ಗುಂಡಿ ತೋಡಿದ್ದು, ಜನರುಓಡಾಡಲು ಕಷ್ಟವಾಗಿದೆ. ಯುಜಿಡಿ ಚೇಂಬರ್‌ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ವಸ್ತು ಬಳಸುತ್ತಿದ್ದು, ಕಡಿಮೆ ಪ್ರಮಾಣದಲ್ಲಿ ಸಿಮೆಂಟ್‌ ಬಳಸಲಾಗಿದೆ. ನಿರ್ಮಿಸಿರುವ ಚೇಂಬರ್‌ನಲ್ಲಿಚೇಂಬರ್‌ನ ಅರ್ಧದಷ್ಟು ಮಣ್ಣು ತುಂಬಿದ ಮೇಲೆ ಪ್ಲಾಸ್ಟಿಂಗ್‌ ಮಾಡಲಾಗುತ್ತಿದೆ. ಈ ಬಗ್ಗೆ ಎಂಜಿನಿಯರ್‌ ಗಮನಕ್ಕೆ ತಂದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾಮಗಾರಿಯಿಂದ ಕಾಲೋನಿಗೆ ಕುಡಿಯುವ ನೀರು ಇಲ್ಲ ದಂತಾಗಿದೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕಳಪೆ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾಲೋನಿಯ ನಿವಾಸಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next