Advertisement

ಸರಕಾರಗಳ ವಿರುದ್ಧ ಪ್ರತಿಭಟನೆ

03:15 PM Feb 14, 2020 | Suhan S |

ಜಮಖಂಡಿ: ಸ್ವಾತಂತ್ರ್ಯ ಹೋರಾಟದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರನ್ನು ಬಂಧಿಸಿ, ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಆನಂದ ನ್ಯಾಮಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

Advertisement

ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಗುರುವಾರ ಜಮಖಂಡಿ-ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದ್ದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇವಲ ಪುಕ್ಕಟೆ ಪ್ರಚಾರ ಪಡೆಯಲು ರಾಷ್ಟ್ರ ನಾಯಕರ ವಿರುದ್ಧ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ದೇಶ-ರಾಷ್ಟ್ರದ ಬಗ್ಗೆ ಕಳಕಳಿ ಇದ್ದರೆ ಪ್ರವಾಹ ಪೀಡಿತ ಜನರ ಬಗ್ಗೆ, ನಿರುದ್ಯೋಗಿ ಯುವಕರ ಬಗ್ಗೆ, ದಿವಾಳಿಯಾಗುತ್ತಿರುವ ದೊಡ್ಡ-ದೊಡ್ಡ ಉದ್ಯಮಗಳ ಬಗ್ಗೆ ಕೇಂದ್ರದಲ್ಲಿ ಧ್ವನಿ ಏತ್ತಲಿ, ಆಗ ಅವರ ಪೌರತ್ವಕ್ಕೆ ಬೆಲೆ ಬರುತ್ತದೆ ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಕೇಂದ್ರದಲ್ಲಿನ ಹೊಸ ಯೋಜನೆಗಳನ್ನು ರಾಜ್ಯಕ್ಕೆ ತಂದು ನಿರುದ್ಯೋಗ ಹೋಗಲಾಡಿಸಲಿ. ಕೇಂದ್ರ ಸರ್ಕಾರದಿಂದ ನೆರೆಪೀಡಿತ ಸಂತ್ರಸ್ತರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಮುಂದಾಗಬೇಕು. ದೇಶದಲ್ಲಿ ಜನರು ಶಾಂತಿಯಿಂದ ಬದುಕಲು ಬಿಜೆಪಿ ಸರಕಾರ ಬಿಡುತ್ತಿಲ್ಲ, ವಿವಾದಾತ್ಮಕ ಹೇಳಿಕೆ, ಗೊಂದಲಗಳನ್ನು ಸೃಷ್ಟಿ ಮಾಡುವ ಜನರಲ್ಲಿ ಭೀತಿ ಮೂಡಿಸುವ ಭಯದ ವಾತಾವರಣ ಮೂಡಿಸುತ್ತಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಮಾತನಾಡಿ, ಅಸಂವಿಧಾನಿಕ, ಅವೈಜ್ಞಾನಿಕ, ಅಸಂಸ್ಕೃತಿಕ ಶಬ್ದಗಳನ್ನು ಬಳಸಿ ಅನಂತಕುಮಾರ ಮಾತನಾಡುತ್ತಿರುವುದನ್ನು ಖಂಡಿಸಿದರು.ನ್ಯಾಯವಾದಿ ಎನ್‌.ಎಸ್‌.ದೇವರವರ, ಬ್ಲಾಕ ಕಾಂಗ್ರೆಸಧ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ರವಿ ಯಡಹಳ್ಳಿ, ರಾಹುಲ ಕಲೂತಿ, ರಾಜು ಪಿಸಾಳ, ರೇವಣೆಪ್ಪ ತೆಲಬಕ್ಕನವರ, ಫಕೀರಸಾಬ ಭಾಗವಾನ, ಈಶ್ವರ ಕರಿಬಸನವರ, ಅರ್ಜುನ ದಳವಾಯಿ, ಮಹೇಶ ಕೋಳಿ, ಈಶ್ವರ ವಾಳೇನ್ನವರ, ಶಾಮರಾವ್‌ ಘಾಟಗೆ, ರಾಜು ಮನ್ನಿಕೇರಿ, ರಾಜೇಂದ್ರ ಪಾಯಗೊಂಡ, ನಿಂಗಪ್ಪ ಗಸ್ತಿ,ದಿಲಾವರ ಶಿರೋಳ, ಬಸು ಹಂಗರಗಿ, ಪ್ರೇಮಾನಂದ ಗೌರೋಜಿ, ಅಜಿತ ಮೇಂಗಾಣಿ, ರಾಜೇಸಾಬ ಕಡಕೋಳ ಪಾಲ್ಗೊಂಡಿದ್ದರು.

ಬಳಿಕ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಹಶೀಲ್ದಾರ್‌ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಮೆರವಣಿಗೆ ಹಳೆ ತಹಶೀಲ್ದಾರ್‌ ಕಚೇರಿಯಿಂದ ಆರಂಭಗೊಂಡು ಹನುಮಾನ ಚೌಕ್‌, ಥೇಟರ್‌ ಚೌಕ್‌, ಅಶೋಕ ವೃತ್ತ, ಡಾ| ರಾಜಕುಮಾರ ರಸ್ತೆ ಮೂಲಕ ಎ.ಜಿ.ದೇಸಾಯಿ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next