ಬಂಟ್ವಾಳ: ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಾಗ ಬೀದಿಗಿಳಿದು ಪ್ರತಿ ಭಟನೆ ನಡೆಸುತ್ತಿದ್ದ ಸಂಘಟನೆಗಳು ಪುತ್ತೂರಿ ನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಗೆ ಯಾಕೆ ಬೀದಿ ಗಿಳಿದು ಪ್ರತಿಭಟನೆ ನಡೆಸಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಶ್ನಿಸಿದ್ದಾರೆ.
ಜು. 5ರಂದು ಬಿ.ಸಿ. ರೋಡ್‌ನಲ್ಲಿ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್‌ಎಸ್‌ಯುಐ ಆಶ್ರಯ ದಲ್ಲಿ ನಡೆದ ಖಂಡನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪ್ರಸ್ತಾವಿಸಿದರು. ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ. ಪದ್ಮಶೇಖರ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಸದಸ್ಯರಾದ ಕೆ. ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಗಾಯತ್ರಿ ರವೀಂದ್ರ ಸಪಲ್ಯ, ಮಂಜುಳಾ ಕುಶಲ, ನಸೀಮಾ ಬೇಗಂ, ಪ್ರಮುಖರಾದ ಸುದರ್ಶನ ಜೈನ್, ಮಾಯಿಲಪ್ಪ ಸಾಲ್ಯಾನ್, ಜಯಂತಿ ಪೂಜಾರಿ, ಪ್ರಶಾಂತ್ ಕುಲಾಲ್, ಐಡಾ ಸುರೇಶ್, ಪರಮೇಶ್ವರ ಎಂ., ಚಂದ್ರಶೇಖರ ಭಂಡಾರಿ, ಸ್ವಪ್ನಾ ವಿಶ್ವನಾಥ, ವೆಂಕಪ್ಪ ಪೂಜಾರಿ, ರಾಜಶೇಖರ ನಾೖಕ್, ಮಹಮ್ಮದ್ ನಂದರಬೆಟ್ಟು, ಜಗದೀಶ ಕುಂದರ್, ಜನಾರ್ದನ ಚಂಡ್ತಿಮಾರ್, ಲುಕ್ಮಾನ್, ಸಿದ್ದಿಕ್ ಬೋಳಂಗಡಿ, ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಗೀತಾ ಪ್ರಕಾಶ್, ಜೆಸಿಂತಾ ಡಿ’ಸೋಜಾ, ಈಶ್ವರ ಪೂಜಾರಿ ಹಿರ್ತಡ್ಕ, ಹೇಮಲತಾ ಅಮ್ಮುಂಜೆ, ಮಲ್ಲಿಕಾ ಪಕ್ಕಳ, ನಂದಾವರ ಮಹಮ್ಮದ್, ರಾಮಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಭಂಡಾರಿ ನಿಧನಕ್ಕೆ ಸಂತಾಪ
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನಕ್ಕೆ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ, ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಷಡ್ಯಂತ್ರ ಜನಸಾಮಾನ್ಯರು ಸಾರ್ವಜನಿಕವಾಗಿ ಕಿರುಕುಳ, ಹಲ್ಲೆಗೆ ಒಳಗಾಗುತ್ತಿದ್ದರೂ ಕಾನೂನು ವ್ಯವಸ್ಥೆ ಯಾಕೆ ಕಾರ್ಯಾಚರಿಸುತ್ತಿಲ್ಲ. ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದರೂ ಬಯಲಿಗೆ ಬಾರದಿರುವ ಹಿನ್ನೆಲೆ ದೊಡ್ಡ ಷಡ್ಯಂತ್ರವಿದೆ.
- ಬಿ. ರಮಾನಾಥ ರೈ ಮಾಜಿ ಸಚಿವರು