ಸೇಲಂ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಹಿಂದಿ ಹೇರಿಕೆ ವಿರೋಧಿಸಿ 85 ವರ್ಷದ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೃತರನ್ನು ಆಡಳಿತಾರೂಢ ಡಿಎಂಕೆಯ ಕೃಷಿ ಒಕ್ಕೂಟದ ಮಾಜಿ ಸಂಘಟಕ ತಂಗವೇಳ್ ಎಂದು ಗುರುತಿಸಲಾಗಿದೆ.
ತಲೈಯೂರ್‌ನ ಡಿಎಂಕೆ ಕಚೇರಿ ಮುಂದೆ ಶನಿವಾರ ಬೆ.11ಗಂಟೆಗೆ ಆಗಮಿಸಿದ ತಂಗವೇಳ್, ಬ್ಯಾನರ್‌ವೊಂದರಲ್ಲಿ “ಮೋದಿ ಸರ್ಕಾರ, ಕೇಂದ್ರ ಸರ್ಕಾರ, ನಮಗೆ ಹಿಂದಿ ಬೇಡ.
ತಮಿಳು ನಮ್ಮ ತಾಯ್ನುಡಿ. ನೀವು ಹಿಂದಿ ಭಾಷೆ ಹೇರಿಕೆ ಮಾಡುವುದರಿಂದ ನಮ್ಮ ವಿದ್ಯಾರ್ಥಿಗಳು ಸೇರಿದಂತೆ ನಮ್ಮೆಲ್ಲರ ಬದುಕು ದುಸ್ತರವಾಗುತ್ತದೆ’ ಎಂದು ಬರೆದು, ತಮ್ಮ ಮೈಮೇಲೆ ತಾವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
Related Articles
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.