ನವದೆಹಲಿ:ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಯ ಪ್ರತಿಗೆ ಬೆಂಕಿ ಹಚ್ಚಿ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಬುಧವಾರ(ಜನವರಿ 13, 2021) ಪ್ರತಿಭಟನೆ ನಡೆಸುವ ಮೂಲಕ ಲೋಹ್ರಿ ಹಬ್ಬವನ್ನು ಆಚರಿಸಿರುವುದಾಗಿ ವರದಿ ತಿಳಿಸಿದೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗಿದರು. ಲೋಹ್ರಿ ಹಬ್ಬವನ್ನು ಉತ್ತರಭಾರತದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಇದು ವಸಂತ ಋತು ಆಗಮನದ ಸಂಕೇತವಾಗಿದ್ದು, ಬೆಂಕಿಯಿಂದ ಸುಡುವುದು ಹಬ್ಬದ ವಿಶೇಷತೆಯಾಗಿದೆ.
ಮಂಗಳವಾರ(ಜ.12) ೀ ಕುರಿತು ಮಾತನಾಡಿದ್ದ ರೈತ ಮುಖಂಡ ಮನ್ ಜೀತ್ ಸಿಂಗ್ ರಾಯ್, ಸಿಂಘು ಗಡಿ ಪ್ರದೇಶದಲ್ಲಿ ಲೋಹ್ರಿ ಹಬ್ಬವನ್ನು ನೂತನ ಕೃಷಿ ಕಾಯ್ದೆಯ ಪ್ರತಿಗಳನ್ನು ಸುಡುವ ಮೂಲಕ ರೈತರು ಆಚರಿಸಲಿದ್ದಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ:ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಟಿಎಂಸಿ ಮಾಜಿ ಸಂಸದ ಸಿಂಗ್ ಬಂಧನ
ಮುಂದಿನ ಹಂತದ ಪ್ರತಿಭಟನೆ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿ ಮುಂದೆ ರೈತರು ಹಾಜರಾಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.