ರಾಯಚೂರು: ನ್ಯಾ| ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಹೇಳಿಕೆ ನೀಡಿದ್ದರಿಂದ ಗುರುವಾರ ನಗರಕ್ಕೆ ಆಗಮಿಸಿ ಸಚಿವ ಪ್ರಭು ಚವ್ಹಾಣ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು. ಸಚಿವರ ಆಗಮನದ ಮಾಹಿತಿ ತಿಳಿದಿ ಮಾದಿಗ ದಂಡೋರಾ ಸಮಿತಿ ಮುಖಂಡರು ಡಿಸಿ ಕಚೇರಿ ಎದುರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ತಡೆ ಹಿಡಿದರು.
ಸಚಿವರ ಕಾರು ಬರುತ್ತಿದ್ದಂತೆ ಬೇರೆ ಮಾರ್ಗದಿಂದ ಬಂದ ಐದಾರು ಜನ ಪ್ರತಿಭಟನಾಕಾರರು ಕಾರು ಅಡ್ಡಗಟ್ಟಿ, ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಹಾಕಲು ಯತ್ನಿಸಿದರು. ಕೂಡಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು, ವಾಹನದಲ್ಲಿ ಕರೆದೊಯ್ದರು.
ಕೊನೆಗೆ ಸಚಿವರು ಪ್ರಗತಿ ಪರಿಶೀಲನೆ ಸಭೆ ನಡೆಸಿ ಡಿಸಿ ಕಚೇರಿ ಆವರಣದ 2ನೇ ಗೇಟ್ ಮೂಲಕ ತೆರಳುವಾಗಲೂ ಮಾದಿಗ ದಂಡೋರ ಹೋರಾಟ ಸಮಿತಿ ಸದಸ್ಯರು ವಾಹನಗಳಿಗೆ ಅಡ್ಡಗಟ್ಟಲು ಯತ್ನಿಸಿದರು. ಅಷ್ಟೊತ್ತಿಗಾಗಲೇ ಪೊಲೀಸರು ಅವರನ್ನು ತಡೆದರು. ಮತ್ತೆ ಎಲ್ಲ ಪ್ರತಿಭಟನಾಕಾರರನ್ನು
ವಶಕ್ಕೆ ಪಡೆದರು.