Advertisement

ಹಾವಿನ ಜತೆ ನಗರಸಭೆ ಮುಂದೆ ಧರಣಿ

03:55 PM May 18, 2019 | Team Udayavani |

ಕೋಲಾರ: ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಲ್ಲಿನ ಜಯನಗರ ಮತ್ತು ಕನಕನಪಾಳ್ಯ  ಬಡಾವಣೆ ವಾಸಿಗಳು ನಗರಸಭೆ ಕಚೇರಿಗೆ ಮನೆಯೊಂದರ ಶೌಚಾಲಯಕ್ಕೆ ಬಂದಿದ್ದ ಹಾವಿನ ಸಮೇತ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕನಕನಪಾಳ್ಯದಲ್ಲಿ ಒಳಚರಂಡಿ ತುಂಬಿರುವುದರಿಂದ ಹಾವುಗಳ ಕಾಟ ಹೆಚ್ಚಾಗಿದೆ. 4 ಬಾರಿ ಹಾವುಗಳು ಸಿಕ್ಕಿವೆ. ನಮ್ಮ ಪರಿಸ್ಥಿತಿ ಅರ್ಥಮಾಡಿಸುವ ಸಲುವಾಗಿ ಡಬ್ಬಿಯಲ್ಲಿ ಹಾವನ್ನು ಹಾಕಿಕೊಂಡು ಬಂದಿರುವುದಾಗಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕನಕನಪಾಳ್ಯ ಬಡಾವಣೆಯಲ್ಲಿ ಸಾಕಷ್ಟು ದಿನಗಳಿಂದಲೂ ಒಳಚರಂಡಿ ಸಮಸ್ಯೆಯಿರುವ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ನಗರಸಭೆ ಕ್ರಮಕೈಗೊಳ್ಳುತ್ತಿಲ್ಲ. ಒಳಚರಂಡಿ ತುಂಬಿರುವುದರಿಂದಾಗಿ ಹಾವುಗಳು ಹೊರಬಂದು ಮನೆಗಳಿಗೆ ನುಗ್ಗುತ್ತಿವೆ. ಇಷ್ಟಾದರೂ ಅಧಿಕಾರಿಗಳು ಅತ್ತ ಸುಳಿದಿಲ್ಲ ಎಂದು ಕಿಡಿಕಾರಿದರು. ನಗರಸಭೆಗೆ ಸದ್ಯ ಡಿ.ಸಿ.ಯವರೇ ಆಡಳಿತಾಧಿಕಾರಿಗಳಾಗಿದ್ದು, ಕೂಡಲೇ ನಮ್ಮ ವಾರ್ಡ್‌ನ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಒಳಚರಂಡಿ ಸಮಸ್ಯೆಯೂ ಮಿತಿ ಮೀರಿದ್ದು, ವಾಹನಗಳ ಚಾಲಕರನ್ನು ಮಾತನಾಡಿಸು ವಂತಿಲ್ಲ. ಈಗ ಹೇಳಿದರೆ 15 ದಿನಗಳಾ ದರೂ ಬರುವುದಿಲ್ಲ, 3 ಸಾವಿರ ಕೊಟ್ಟರೆ ತಕ್ಷಣ ಬರುತ್ತಾರೆ. ಈ ಅಕ್ರಮಗಳಿಗೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿಲ್ಲ ಎಂದು ಆರೋಪಿಸಿದರು. ಚಂದ್ರೇಗೌಡ, ಎಸ್‌.ವಿ.ಮುನಿವೆಂಕಟಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next