Advertisement

ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

04:13 PM Apr 17, 2019 | pallavi |

ಕಲಬುರಗಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ವಿಪರಿತವಾಗುತ್ತಿದ್ದು, ಜನ-ಜಾನುವಾರುಗಳು ಪರದಾಡುತ್ತಿದ್ದು ಈ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಚಿಂಚೋಳಿ ತಾಲೂಕಿನ ಸುಂಠಾಣ, ಸುಂಠಾಣ ತಾಂಡಾದಲ್ಲಿ ಪೈಪ್‌ಲೈನ್‌ ಮಾಡಿಸಬೇಕು. ರುಮ್ಮುನಗೂಡ ತಾಂಡಾದಲ್ಲಿನ ಹಳೆ ಬಾವಿಗಳ
ಹೂಳೆತ್ತಬೇಕು. ಸಾಸರಗಾಂವ, ರುಮ್ಮನಗುಡ ಗ್ರಾಮದಲ್ಲಿ ಹೊಸ ಬೋರ್‌ವೆಲ್‌ ಹಾಕಿಸಬೇಕು. ರಟಕಲ್‌ ತಾಂಡಾದಲ್ಲಿ, ರಟಕಲ್‌ ಮಾದಿಗರ ಓಣಿಯಲ್ಲಿ , ಕುರುಬರ ಓಣಿಯಲ್ಲಿ ಬೋರವೆಲ್‌ ಹಾಕಿಸಬೇಕು. ಹಾಳುಬಿದ್ದ ಬೋರ್‌ವೆಲ್‌ ದುರಸ್ತಿ ಮಾಡಬೇಕು, ಕುಡಳ್ಳಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕುಡಿವ ಹನಿ ನೀರಿಗಾಗಿ ದಿನೇದಿನೇ ಪರಿಸ್ಥಿತಿ ಉಲ್ಬಣವಾಗುತ್ತಿದೆ. ಜನಜಾನುವಾರುಗಳು ಸಂಕಷ್ಟಕ್ಕೆ
ಸಿಲುಕಿವೆ.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೇ ಜನರು ರೊಚ್ಚಿಗೇಳುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು. ಲೋಕಸಭೆ ಚುನಾವಣೆಯ ನೆಪವೊಡ್ಡಿ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಆದರೆ ಜನರು ಹನಿಹನಿ ನೀರಿಗಾಗಿ ಪರಿತಾಪ ಪಡುತ್ತಿದ್ದಾರೆ ಇದು ಸರಿಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next