Advertisement

ವಾಟಾಳ್‌ ಪಕ್ಷದಿಂದ ಇಂದು ಪ್ರತಿಭಟನೆ

11:43 AM Dec 06, 2018 | |

ಬೆಂಗಳೂರು: ಕರ್ನಾಟಕ ಸರ್ಕಾರಕ್ಕೆ ಮೇಕೆದಾಟು ಯೋಜನೆಯ ವಿಸ್ತ್ರತ ವರದಿ ನೀಡಲು ಅವಕಾಶ ನೀಡಿರುವ ಕೇಂದ್ರ ಜಲ ಆಯೋಗದ ಕ್ರಮ ವಿರೋಧಿಸಿ ತಮಿಳುನಾಡು ಸರ್ಕಾರ ಕರೆದಿರುವ ವಿಶೇಷ ಅಧಿವೇಶನ ಖಂಡಿಸಿ ಡಿ.6ರಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಮೇಕೆದಾಟು ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು ದೊರೆಯಲಿದೆ. 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದು.

ಸಮುದ್ರಕ್ಕೆ ಹೋಗುವ ನೀರನ್ನು ಕರ್ನಾಟಕ ಬಳಸಿಕೊಳ್ಳಲಿದೆ. ಇದನ್ನು ತಮಿಳುನಾಡು ಸರ್ಕಾರ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಆದರೂ ತಮಗೆ ಅನ್ಯಾಯವಾದಂತೆ ವರ್ತಿಸುತ್ತಿರುವ ತಮಿಳುನಾಡು ಸರ್ಕಾರ ಗುರುವಾರ ವಿಶೇಷ ಅಧಿವೇಶನ ಕರೆದಿದೆ.  ಇದನ್ನು ವಿರೋಧಿಸಿ ಡಿ.6ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಭೂತದಹನ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಅದ್ಧೂರಿಯಾಗಿ ಆಚರಿಸಿ: ಪ್ರತಿ ವರ್ಷ ನಡೆಯುವಂತೆ ಈ ವರ್ಷವೂ ಹಂಪಿ ಉತ್ಸವ ವೈಭವಯುತವಾಗಿ ನಡೆಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು. ಇದು ಐತಿಹಾಸಿಕವಾದ ಉತ್ಸವವಾಗಿದೆ. ಈ ಉತ್ಸವವನ್ನು ವೈಭಯುತವಾಗಿ ಆಚರಿಸದಿದ್ದರೆ ಕರ್ನಾಟಕದ ಸಾಮ್ರಾಜ್ಯದ ಇತಿಹಾಸಕ್ಕೆ ಅವಮಾನ ಮಾಡಿದಂತಾಗುತ್ತದೆ. ಬರಗಾಲವಿದ್ದರೂ ಅನೇಕ ಉತ್ಸವಗಳನ್ನು ರಾಜ್ಯ ಸರ್ಕಾರ ನಡೆಸುತ್ತಿದೆ.

ಬರಗಾಲದ ನೆಪವೊಡ್ಡಿ ಮೈಸೂರು ದಸರವನ್ನು ನಿಲ್ಲಿಸಲಿಲ್ಲ. ಅದ್ಧೂರಿಯಾಗಿ ಮೈಸೂರು ದಸರ ಆಚರಣೆ ಮಾಡಲಾಯಿತು. ಹಂಪಿ ಉತ್ಸವಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಬರಗಾಲ ಅಥವಾ ಇತರೆ ನೆಪಗಳನ್ನು ನೀಡಿ ಹಂಪಿ ಉತ್ಸವವನ್ನು ನಿಲ್ಲಿಸಬಾರದು  ಅಥವಾ ಸರಳವಾಗಿ ಆಚರಣೆ ಮಾಡಬಾರದು. ಹಂಪಿ ಉತ್ಸವ ಮೊದಲಿನಂತೆ ನಡೆಯದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನಿಡಿದರು.

Advertisement

ಕೃಷ್ಣರಾಜಸಾಗರದ ಮುಂದೆ ಡಿಸ್ನಿ ಲ್ಯಾಂಡ್‌ ಮಾಡಲು ಸರ್ಕಾರ ಮುಂದಾಗಬಾರದು. ಇದರಿಂದ ಇಡೀ ಜಲಾಶಯಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಕಾವೇರಿ ಪ್ರತಿಮೆ ಮಾಡುವುದರಿಂದ ಜಲಾಶಯಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next