Advertisement

ಕೃತಕ ಮರಳು ಘಟಕ ಸ್ಥಗಿತಗೊಳಿಸಲು ಅಹೋರಾತ್ರಿ ಧರಣಿ

10:09 AM Jul 22, 2019 | Team Udayavani |

ಜಮಖಂಡಿ: ತಾಲೂಕಿನ ಮರೇಗುದ್ದಿ-ಪಿಎಂ ಬುದ್ನಿ ಗ್ರಾಮದಲ್ಲಿ ಅಕ್ರಮವಾಗಿ ಕೃತಕ (ಎಂ ಸ್ಯಾಂಡ್‌ ಉಸುಕು) ಮರಳು ತಯಾರಿಕೆ ಘಟಕ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕಳೆದ 38 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಗ್ರಾಮಸ್ಥರು ಸೋಮವಾರ ಜು. 22ರಂದು ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸ್ಥಗಿತಗೊಳಿಸಿ ಉಗ್ರ ಹೋರಾಟ, ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Advertisement

ತಾಲೂಕಿನ ಮರೇಗುದ್ದಿ ಮತ್ತು ಪಿ.ಎಂ.ಬುದ್ನಿ ಎರಡು ಗ್ರಾಮಗಳ ಸರಹದ್ದಿನಲ್ಲಿ ಅಕ್ರಮ ಗಣಿಗಾರಿಕೆ ಬಾಲಾಜಿ ಎಂ ಸ್ಯಾಂಡ್‌ ಫ್ಯಾಕ್ಟರಿ ಅನಧಿಕೃತವಾಗಿ ನಡೆಸುತ್ತಿರುವುದರ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿ ತಿಂಗಳು ಗತಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಧರಣಿ ಸತ್ಯಾಗ್ರಹದಲ್ಲಿ ಅಬ್ದುಲ್ ಸಿಕಂದರ, ಶಿವನಿಂಗ ತುಬಚಿ, ಜಗು ಮಠಪತಿ, ಪ್ರದೀಪ ನಂದೆಪನ್ನವರ, ಪ್ರಭು ಬಾರಿಕಾಯಿ, ಪರಸಪ್ಪ ಬಡಿಗೇರ, ರಮೇಶ ಮಾಯನ್ನವರ, ಅಶೋಕ ಹಲಗಣ್ಣವರ, ಶ್ರೀಶೈಲ ಮಾಯನ್ನವರ, ವೆಂಕಪ್ಪ ಕಾಗಿನವರ, ಶಾಸಪ್ಪ ನಾಯಕ, ವೆಂಕಪ್ಪ ಕಡಕೋಳ, ಅಡಿವೆಪ್ಪ ಇಟಗಿ, ರಾಜಶೇಖರ ಪಾಟೀಲ, ಮಲ್ಲಪ್ಪ ಹರಗೋಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next