Advertisement

ದೇವಸ್ಥಾನ ಜಾಗೆ ಉಳಿಸಲು ಧರಣಿ

12:04 PM Oct 19, 2017 | |

ಬಸವನಬಾಗೇವಾಡಿ: ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ಕೈ ತೋಟ ಸೇರಿದಂತೆ ದೇವಸ್ಥಾನದ ಆವರಣದಲ್ಲಿ ವಿಸ್ತರಣೆ ಮಾಡುವುದನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮಂಗಳವಾರ ಬಸವೇಶ್ವರ ದೇವಸ್ಥಾನದ ಸಂರಕ್ಷಣಾ ಸಮಿತಿ ಸದಸ್ಯರು ಮಂಗಳವಾರ ದೇವಸ್ಥಾನ ಆವರಣದಲ್ಲಿ ಧರಣಿ ಆರಂಭಿಸಿದರು.

Advertisement

ಮುಖಂಡರಾದ ಸಂಗಪ್ಪ ಅಡಗಿಮಣಿ, ಪುರಸಭೆ ಸದಸ್ಯ ನೀಲಪ್ಪ ನಾಯಕ, ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈ ಹಿಂದೆ ಇದ್ದ ರಸ್ತೆಯನ್ನು ಯಥಾಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಸ್ತೆ ವಿಸ್ತರಣೆಗಾಗಿ ದೇವಸ್ಥಾನದ ಮುಂಭಾಗದ ಕೈತೋಟದ ಜಾಗೆ, ಹಾಗೂ ಆವರಣದಲ್ಲಿನ ಸಿಂಹಾಸನ ಮಾಮಲೇದಾರರ ಪುತ್ಥಳಿ ತೆರವುಗೊಳಿಸುವುದರಿಂದ ದೇವಸ್ಥಾನದ ಸೌಂದರ್ಯ ಹಾಳಾಗುತ್ತದೆ. ಹೀಗಾಗಿ ದೇವಸ್ಥಾನದ ಆವರಣದ ಜಾಗೆ ಯಥಾ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ರಸ್ತೆ ವಿಸ್ತರಣೆಗಾಗಿ ಈಗಾಗಲೇ ತೆಗೆದು ಹಾಕಲಾಗಿರುವ ಕೈ ತೋಟಕ್ಕೆ ಜೋಡಿಸಿದ್ದ ಕಬ್ಬಿಣದ ಸರಳಗಳನ್ನು ಈ ಹಿಂದೆ ಇದ್ದಂತೆ ಜೋಡಣೆ ಮಾಡಬೇಕು.

ದೇವಸ್ಥಾನದ ಮುಂಭಾಗದಲ್ಲಿ ಈಗಿರುವ ರಸ್ತೆಯನ್ನು ಯಥಾ ಪ್ರಕಾರ ನಿರ್ಮಿಸಬೇಕು ಹಾಗೂ ರಾಜ್ಯ ಹೆದ್ದಾರಿ ಮಾರ್ಗಕ್ಕೆ
ಅನುಕೂಲವಾಗುವಂತೆ ಪಟ್ಟಣದ ಹೊರ ಭಾಗದಲ್ಲಿ ಹಾದು ಹೋಗುವಂತೆ ರಿಂಗ್‌ ರೋಡ್‌ ನಿರ್ಮಾಣ ಮಾಡಬೇಕೆಂದು
ಆಗ್ರಹಿಸಿದರು 

ಕೆಲವರ ವಿರೋಧ: ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಾರ್ಕೆಟ್‌ನಲ್ಲಿ ಇರುವ ಅಂಗಡಿಗಳ ಕೆಲ ಮಾಲೀಕರು ಆಗಮಿಸಿ 2006ರಲ್ಲಿ ರಸ್ತೆ ಅಗಲೀಕರಣ ಸಮಯದಲ್ಲಿ ಸಾಕಸ್ಟು ಜಾಗೆ ಕಳೆದುಕೊಂಡಿರುವ ನಾವು ಈಗ ಸಂಕಷ್ಟದಲ್ಲಿ ಇದ್ದೇವೆ. ಅದಕ್ಕೆ ನೀವು ಹೋರಾಟ ಮಾಡುವುದರಿಂದ ಮಾರ್ಕೇಟ್‌ ಅಂಗಡಿಗಳಿಗೆ ಆತಂಕವಾಗಬಹುದು. ಅದಕ್ಕೆ ಈ ಹೋರಾಟ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಧರಣಿ ನಿರತರು ನಾವು ನಡೆಸುತ್ತಿರುವ ಹೋರಾಟ ದೇವಸ್ಥಾನ ಜಾಗೆ ರಕ್ಷಣೆಗಾಗಿ ಹೊರತು ಬೇರೆಯವರ ಜಾಗೆಯಲ್ಲಿ ರಸ್ತೆ ನಿರ್ಮಿಸಲು ಅಲ್ಲ ಎಂದು ಪ್ರತ್ಯುತ್ತರ ನೀಡಿದರು. 

ಅಧಿಕಾರಿಗಳ ಭೇಟಿ: ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಹಾಗೂ ಕೆಸಿಪಿ ಎಇಇ ಹೇಮರಾಜರವರು ಧರಣಿ ಸ್ಥಳಕ್ಕೆ ಆಗಮಿಸಿ ಪಟ್ಟಣದಲ್ಲಿ ಹೆದ್ದಾರಿ ರಸ್ತೆ ನಿರ್ಮಣಕ್ಕೆ ದೇವಸ್ಥಾನದ ಆವರಣದ ಜಾಗೆಯಲ್ಲಿ ಗುರುತಿಸಿರುವ ಜಾಗೆ ಸರ್ಕಾರಿ ಜಾಗೆ ಆಗಿದ್ದು ಅದರಲ್ಲಿ ಸ್ವಲ್ಪ ಜಾಗೆ ಬಿಟ್ಟು ಮುಂದೆ ರಸ್ತೆ ನಿರ್ಮಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಆಗ ಧರಣಿ ನಿರತರು ದೇವಸ್ಥಾನ ಆವರಣದ ಸ್ವಲ್ಪ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದು ಬೇಡ. ಒಂದು ವೇಳೆ ರಸ್ತೆ ಮಾಡಲು ಮುಂದಾದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಧರಣಿಯಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರರು, ಶಿವಾನಂದ ಈರಕಾರ ಮುತ್ಯಾ, ವಿವಿಧ ಸಂಘಟನೆ
ಮುಖಂಡರಾದ ರಾಜು ಮುಳವಾಡ, ಪರಶುರಾಮ ಅಡಗಿಮನಿ, ಜಿಪಂ ಸದಸ್ಯ ಸಂತೋಷ ನಾಯಕ, ಪರಶುರಾಮ ಜಮಖಂಡಿ, ಪ್ರವೀಣ ಪವಾರ, ಪ್ರವೀಣ ಚಿಕ್ಕೊಂಡ, ಶಂಕ್ರಪ್ಪ ಹಾರಿವಾಳ, ಸಂಗಪ್ಪ ಕ್ವಾಟಿ, ಬಸಣ್ಣ ದೇಸಾಯಿ, ಪಾವಡೆಪ್ಪ ಅವಟಿ, ಬಾಬು ನಿಕ್ಕಂ, ಬಾಬು ನಿಡಗುಂದಿ, ಮುದಕಪ್ಪ ಗಬ್ಬೂರ, ಅನಿಲ ಮುಳವಾಡ, ಬಸವರಾಜ ಬಿಜಾಪುರ, ಸಂಗಮೇಶ ವಾಡೇದ, ಸುರೇಶ ಗುಂಡಿ, ಶ್ರೀಶೈಲ ನಾಯ್ಕೂಡಿ, ಅಶೋಕ ಗುಳೇದ, ಸುರೇಶ ನಾಯಕ, ಸುನೀಲ ಬೇದರಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next