Advertisement

Protest: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ… ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ

12:02 PM Aug 26, 2024 | Team Udayavani |

ಕೊಟ್ಟಿಗೆಹಾರ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದ್ದು ಇದರಿಂದ ಬೇಸತ್ತ ಪೋಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಗ್ಗಸಗೋಡು ನಲ್ಲಿರುವ 1ರಿಂದ 7 ನೇ ತರಗತಿಗೆ ವರೆಗೂ ಇರುವ ಸರಕಾರಿ ಶಾಲೆಯಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು ಆದರೆ ಇಡೀ ಶಾಲೆಗೆ ಇಬ್ಬರೇ ಶಿಕ್ಷಕರು ಇರುವುದರಿಂದ ಮಕ್ಕಳು ಪಾಠ ವಂಚಿತರಾಗುತ್ತಿದ್ದಾರೆ ಅಲ್ಲದೆ ಶಾಲೆಗೆ ಶಿಕ್ಷಕರನ್ನು ವರ್ಗಾವಣೆ ಮಾಡದೇ ನಿರ್ಲಕ್ಷ ವಹಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗಿ ಆದಷ್ಟು ಬೇಗ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬಗ್ಗಸಗೋಡು ಸರ್ಕಾರಿ ಶಾಲೆಗೆ ಶತಮಾನಗಳ ಇತಿಹಾಸವಿದ್ದು ಈ ಶಾಲೆಗೆ ಶಿಕ್ಷಕರನ್ನು ವರ್ಗಾವಣೆ ಮಾಡದೆ ಶಿಕ್ಷಣಧಿಕಾರಿಗಳು ನಿರ್ಲಕ್ಷವಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Tragic: ಮಗನ ಆತ್ಮಹತ್ಯೆ ವಿಷಯ ತಿಳಿದು 3 ಗಂಟೆಯಲ್ಲೇ ತಾಯಿ ಕೂಡ ಸಾವು

Advertisement

Udayavani is now on Telegram. Click here to join our channel and stay updated with the latest news.

Next