Advertisement

ರಾಜಿ ಸಂಧಾನದಿಂದ ಪ್ರತಿಭಟನೆ ವಾಪ‌ಸ್‌

02:10 PM Jul 17, 2019 | Suhan S |

ಹುಕ್ಕೇರಿ: ಹುಕ್ಕೇರಿ ತಹಶೀಲ್ದಾರ್‌ ವರ್ತನೆ ಖಂಡಿಸಿ ನ್ಯಾಯವಾದಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿರಿಯ ವಕೀಲರ ಸಂಧಾನದ ಮೂಲಕ ಬಗೆಹರಿದಿದೆ.

Advertisement

ಹಲವಾರು ತಿಂಗಳಿನಿಂದ ಹುಕ್ಕೇರಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟಿ ವಕೀಲರ ಜತೆಗೆ ಸರಿಯಾಗಿ ಸ್ಪಂದಿಸದೇ ಗಂಟೆಗಟ್ಟಲೇ ಬಾಗಿಲಲ್ಲಿ ನಿಲ್ಲಿಸುವುದು, ಕಕ್ಷಿದಾರರ ಮುಂದೆ ವಕೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ವರ್ತಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಕೀಲರು ತಹಶೀಲ್ದಾರ್‌ ವಿರುದ್ಧ ಮಂಗಳವಾರ ಕೋರ್ಟ್‌ ಕಲಾಪ ಬಹಿಷ್ಕರಿಸಿ ಜಿಲ್ಲಾಧಿಕಾರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲು ತೀರ್ಮಾನಿಸಿದ್ದರು. ಅದರೆ ಕೆಲಹಿರಿಯ ವಕೀಲರು ಮಧ್ಯಸ್ಥಿಕೆ ವಹಿಸಿ ತಹಶೀಲ್ದಾರ್‌ ಅವರನ್ನು ಸಂಘದ ಸಭಾಭವನದಲ್ಲಿ ಮಾತುಕತೆ ನಡೆಸುತ್ತಿರುವಾಗ ಕೆಲ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ನ್ಯಾಯವಾದಿಗಳಾದ ರಾಮಚಂದ್ರ ಜೋಶಿ, ಪ್ರಕಾಶ ಮುತಾಲಿಕ ಬಿ.ವಿ. ಪಾಸಪ್ಪಗೋಳ ಮಾತನಾಡಿ, ನಾವೂ ಕೂಡ ಸಾರ್ವಜನಿಕರ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಹಶೀಲ್ದಾರರಿಗೆ ಗೌರವ ನೀಡಿದ್ದೇವೆ. ಆದರೆ ತಾವು ಈ ರೀತಿ ವಕೀಲರ ವೃತ್ತಿಗೆ ಅವಮಾನಿಸುತ್ತಿರುವುದು ಸರಿಯಲ್ಲ. ಜನತೆಗೆ ನ್ಯಾಯ ದೊರಕಿಸುವ ಬದಲು ಮುಂದಿನ ಹಂತಕ್ಕೆ ಮಾಡುತ್ತಿರುವುದರಿಂದ ಕಕ್ಷಿದಾರರಿಗೆ ತೊಂದರೆಯಾಗುತ್ತದೆ. ಅಲ್ಲದೆ ನ್ಯಾಯಾಲದ ಪ್ರಕರಣದಲ್ಲಿ ಕ್ಷಕಿದಾರೊಡನೆ ನೇರವಾಗಿ ಚರ್ಚಿಸುವುದು ತಪ್ಪು. ಇದು ಹಲವು ಅನುಮಾನಕ್ಕೆ ಆಸ್ಪದ ನೀಡುತ್ತದೆ ಎಂದು ಹೇಳಿದರು.

ತಹಶೀಲ್ದಾರ್‌ ರೇಷ್ಮಾ ತಾಳಿಕೋಟಿ ಮಾತನಾಡಿ, ತಾವು ಉದ್ದೇಶಪೂರ್ವಕವಾಗಿ ವಕೀಲರನ್ನು ಅವಮಾನಿಸುವುದಾಗಲಿ ಅಥವಾ ಸಾರ್ವಜನಿರ ಮುಂದೆ ಅಸಭ್ಯವಾಗಿ ವರ್ತಿಸಿ ಮಾತನಾಡಿಲ್ಲ ಎಂದ ಅವರು, ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆಂದು ಕ್ಷಮೆಯಾಚಿಸಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ಅವರಗೋಳ, ಉಪಾಧ್ಯಕ್ಷ ಎ.ಕೆ. ಹುಲಿಕಟ್ಟಿ, ಕಾರ್ಯದರ್ಶಿ ಎಚ್.ಎಲ್. ಪಾಟೀಲ, ಸದಸ್ಯ ಡಿ.ಐ. ಅಲಗುರಿ, ಎಸ್‌.ಎ. ಪಾಟೀಲ, ಆರ್‌.ಪಿ. ಜಳಕಿ, ಎಂ.ಎಂ. ಪಾಟೀಲ, ಎಸ್‌.ಎಸ್‌. ನಾಗನೂರಿ, ಲಿಂಗರಾಜ ನಾಯಿಕ, ಮಂಜು ಗಸ್ತಿ, ಶಿವಾನಂದ ಮರಿನಾಯಕ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next