ಗುಳೇದಗುಡ್ಡ: ಪಟ್ಟಣದಲ್ಲಿ 332 ನಿವೇಶನ ಹಂಚಿಕೆ ಮಾಡಲಾಗಿದ್ದು, ಅವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅವುಗಳು ಬಿದ್ದು ಹೋಗಿದ್ದು, ಅಲ್ಲಿನ ಫಲಾನುಭವಿಗಳಿಗೆ ಆಶ್ರಯ ಮನೆಗಳ ನಿರ್ಮಾಣ ಹಾಗೂ ಹೊಸದಾಗಿ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ನೇಕಾರ ಮಹಿಳೆಯರು, ಸಾರ್ವಜನಿಕರು ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಯ ಮೇಲೆ ಧರಣಿ ಸತ್ಯಾಗ್ರಹ ಆರಂಭಿಸಿದರು.
ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಮುಖಂಡರಾದ ಅಶೋಕ ಹೆಗಡಿ, ಶ್ರೀಕಾಂತ ಹುನಗುಂದ ಮಾತನಾಡಿ, ನಮ್ಮ ಹೋರಾಟ ಯಾರ ವಿರುದ್ಧವು ಅಲ್ಲ. ಇದು ಪಕ್ಷಾತೀತವಾಗಿದ್ದು, ನಮ್ಮ ಜನರ ಸಮಸ್ಯೆ ಪರಿಹಾರವಾಗುವವರೆಗೂ ಈ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ. ಪ್ರತಿದಿನ 50 ಮಂದಿಯಂತೆ ಈ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಅಧಿಕಾರಿಗಳು ನಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನೇಕಾರ ಮುಖಂಡರಾದ ಅಶೋಕ ಹೆಗಡಿ, ಶ್ರೀಕಾಂತ ಹುನಗುಂದ, ನಿಂಗಪ್ಪ ಎಣ್ಣಿ, ರಾಜಕುಮಾರ ಚಂದಾಪೂರ, ಮಾರುತಿ ಅಂಬೋರೆ, ಸಿದ್ದು ಅರಕಾಲಚಿಟ್ಟಿ, ಸಾವಿತ್ರಿ ಗೊಗ್ಗಲ, ಶಾಂತವ್ವ ರೂಡಗಿ, ರುಕ್ಮೀಣಿ ಗುಂಡಮಿ, ಟಾಕವ್ವ ರಾವಳ,ರೇವಣಸಿದ್ದ ಬಸುಪಟ್ಟದ, ದುಂಡವ್ವ ಮೊರಬದ, ಚನ್ನವ್ವ ಶಿರೂರ, ಲಕ್ಷ್ಮೀಬಾಯಿ ಚಕ್ಕಡಿ, ಬೈಲಪ್ಪ ಚಲವಾದಿ, ಶಾಂತವ್ವ ಮುರನಾಳ, ಗೌರಿ ಹದ್ಲಿ, ಮೂಕಪ್ಪ ಚಲವಾದಿ ಧರಣಿಯಲ್ಲಿ ಭಾಗವಹಿಸಿದ್ದಾರೆ.