ಬೀದರ್: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವ ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಆ.3ರ ಗುರುವಾರ ನಗರದಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ ಸೋಲಪುರ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್‍ಯಾಲಿ ನಡೆಸಿದರು. ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಈ ವೇಳೆ ಪ್ರಮುಖರು ಮಾತನಾಡಿ, ಭ್ರಷ್ಟಾಚಾರ, ದುರ್ನಡತೆ ಮತ್ತು ಮುಂತಾದ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ ಎ.ಡಿ.ಜಿ.ಪಿ. ಚಂದ್ರಶೇಖರ ಅವರನ್ನು ಕೂಡಲೇ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದು, ರೈತರ ಕಣ್ಮಣಿಯಾಗಿದ್ದಾರೆ. ದುರ್ನಡತೆಯ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಗೆ, ಪ್ರಮುಖರಾದ ದೇವೇಂದ್ರ ಸೋನಿ, ರಾಜು ಕಡ್ಯಾಳ, ಐಲಿಂಜಾನ್ ಮಠಪತಿ, ಎಮ್.ಡಿ ಅಸೋದುದ್ದೀನ್, ಸಜ್ಜದ್ ಸಾಹೇಬ್, ರಾಜಶೇಖರ ಜವಳೆ, ಬೊಮಗೊಂಡ ಚಿಟ್ಟಾವಾಡಿ, ಲಲಿತಾ ಕರಂಜಿ, ಅಭಿ ಕಾಳೆ, ಬಸವರಾಜ ಹಾರುಗೇರಿ, ಮಕ್ಸೂದ್ ಹಲಿ, ಶಿವಪುತ್ರ ಮಾಳಗೆ, ಪ್ರಲ್ಹಾದ್ ಚಿಟ್ಟಾವಾಣಿ, ಸಂಗು ಚಿದ್ರಿ, ರಾಜು ಚಿಂತಾಮಣಿ, ಅರುಣಕುಮಾರ್ ಎಸ್ ಹೊಸಪೇಟೆ, ಬಸವರಾಜ್ ಶಾಪೂರ್, ರವಿಕುಮಾರ್ ಎಸ್.ಎನ್ ಸಿರ್ಸಿ, ಪ್ರಶಾಂತ ವಿಶ್ವಕರ್ಮ, ಮಹಮ್ಮದ್ ಸಲಿಂ ಚಿಕನ್, ಜಗದೇವಿ ಮೇತ್ರಿ, ಶಾಂತಮ್ಮ, ನಾಗಮ್ಮ, ಲಕ್ಷ್ಮಣ್ ಗಾದಗಿ, ಚಂದಪ್ಪ, ಹಿರಾಮಣಿ ಬುದೇರಾ, ಶಿವಾಜಿ ಬರೂರ, ಸಂಜು ಬರೂರ, ಶಿವರಾಜ ಬಗದಲ್, ಗುರುದಾಸ್ ಕೋಳಾರ ಕೆ, ಜಾನ್ಸನ್, ಅಂಬಾದಾಸ ಸೋನಿ ಮತ್ತಿತರರು ಇದ್ದರು.