Advertisement

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

06:04 PM Feb 08, 2022 | Shwetha M |

ಚಡಚಣ: ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಾವಿನಾಳ ಇಂಡಿಯನ್‌ ಸಕ್ಕರೆ ಕಾರ್ಖಾನೆ ಕಾರ್ಮಿಕರು ಕಾರ್ಖಾನೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಎರಡು ವರ್ಷದಿಂದ ಪಿಎಫ್‌, ಬೋನಸ್‌, ಸಕ್ಕರೆ ನೀಡಿಲ್ಲ. 2014ರಿಂದ ಇಲ್ಲಿವರೆಗೆ ಹೆಚ್ಚುವರಿ ಮಾಡಿಸಿಕೊಂಡ ಕೆಲಸದ ವೇತನ ನೀಡಿಲ್ಲ. ಕಾರ್ಖಾನೆ ಆಡಳಿತ ಮಂಡಳಿವರು ಪ್ರತಿ ಕಾರ್ಮಿಕರ ಮೇಲೆ 5 ಲಕ್ಷದಿಂದ 15 ಲಕ್ಷದವರೆಗೆ ಪಡೆದ ಸಾಲವನ್ನು ಮರುಪಾವತಿಸಿದ ಕಾರಣ ಬ್ಯಾಂಕಿನವರು ನಮಗೆ ಯಾವುದೇ ಸಾಲ ನೀಡುತ್ತಿಲ್ಲ. ಇದರಿಂದ ನಮಗೆ ತೊಂದರೆ ಅನುಭವಿಸುವಂತಾಗಿದೆ ಎಂದರು.

ಇದೆಲ್ಲವನ್ನು ಸಹಿಸಿಕೊಂಡು ಬಂದರೂ ಸುಮಾರು 5 ತಿಂಗಳಿನಿಂದ ವೇತನ ಕೂಡಾ ಪಾವತಿಸಿಲ್ಲ. ಕಾರ್ಖಾನೆಯ ಎಂಡಿ, ಆಡಳಿತ ಮಂಡಳಿಯವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಕೂಡಲೇ ಆಡಳಿತ ಮಂಡಳಿವರು ನಮ್ಮೆಲ್ಲ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಿಂಪಡೆಯಲ್ಲ ಎಂದು ಎಚ್ಚರಿಸಿದರು.

ಕಾರ್ಖಾನೆಯ ಎಂಜನಿಯರ್‌ ರಾಹುಲ್‌ ಇರಸೂರ ಪ್ರತಿಭಟನಕಾರರ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ಕಾರ್ಖಾನೆ ಎಂಡಿ ಸಂದೀಪ ಪಾಟೀಲ ಆಗಮಿಸಿ ಮೂರು ತಿಂಗಳ ವೇತನ ಪಾವತಿಸುವುದಾಗಿ ಹೇಳಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರೂ ಸಹ ಕಾರ್ಮಿಕರು ಮಾತ್ರ ನಮ್ಮ ಪೂರ್ಣ ಪ್ರಮಾಣದ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಹಿಂಪಡೆಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next