Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 21ರಂದು ಪ್ರತಿಭಟನೆ

11:54 AM Sep 16, 2019 | Suhan S |

ಬ್ಯಾಡಗಿ: ಆಣೂರ ಬುಡಪನಹಳ್ಳಿ ಕೆರೆಗಳಿಗೆ ನೀರುತುಂಬಿಸುವ ಯೋಜನೆ ಜಾರಿ, ಬೆಳೆ ವಿಮೆ ವಿತರಣೆ ಸೇರಿದಂತೆ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡುವಂತೆ ಆಗ್ರಹಿಸಿ ಸೆ.21 ರಂದು ಬೃಹತ್‌ ರೈತ ಸಂಘದ ನೇತೃತ್ವದಲ್ಲಿ ಮುಖ್ಯರಸ್ತೆ ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಗಂಗಣ್ಣ ಎಲಿ ಹೇಳಿದರು.

Advertisement

ಪಟ್ಟಣದ ವಿಎಸ್‌ಎಸ್‌ ಬ್ಯಾಂಕ್‌ನಲ್ಲಿ ನಡೆದ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 11 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಅಧಿಕಾರದಲ್ಲಿದ್ದ ಹಲವಾರು ಶಾಸಕರು ಮುಖ್ಯರಸ್ತೆ ಅಗಲೀಕರಣಕ್ಕೆ ಮುಂದಾಗಿಲ್ಲ. ಇದು ನಾಚಿಗೇಡಿನ ಸಂಗತಿ. ಪಟ್ಟಣ ಹಾಗೂ ತಾಲೂಕನ್ನು ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿ ಯಾವೊಬ್ಬ ಶಾಸಕರಿಗೂ ಇಲ್ಲದಿರುವುದು ಮತ ಹಾಕಿದ ನಮ್ಮ ಪಾಲಿನ ದುರಂತವೆ ಸರಿ. ಈ ವರೆಗೂ ಶಾಂತಿಯುತ ಹೋರಾಟ ನೋಡಿದ್ದೀರಿ, ಸೆ.21ರಂದು ಮುಖ್ಯರಸ್ತೆ ಬಂದ್‌ ಮಾಡಿ ಅನಿರ್ಧಿಷ್ಠಾವಧಿ ವರೆಗೆ ಉಗ್ರಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಮುಖ್ಯರಸ್ತೆ ಅಗಲೀ ಕರಣ ಮಾಡುವುದಾಗಿ ಭರವಸೆಗಳ ಮಹಾಪೂರವನ್ನೆ ಹರಿಸಿದ್ದು ಬಿಟ್ಟರೆ ಮತ್ಯಾವ ಕೆಲಸವನ್ನೂ ಮಾಡಿಲ್ಲ. ಮುಖ್ಯರಸ್ತೆಗೆ 15 ಕೋಟಿ ರೂ. ಬಿಡುಗಡೆಗೊಳಿಸಿ ಆಡಳಿತಾತ್ಮಕ ಅನುಮೋದನೆ ತರಲು ಸಾಧ್ಯವಾಗದ ಶಾಸಕರು ಆಣೂರ ಹಾಗೂ ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಗೆ 365 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ತರವುದು ಕನಸಿನ ಮಾತಾಗಿದೆ ಎಂದು ದೂರಿದರು. ಸೆ.21 ರಂದು ನಡೆಯುವ ಪ್ರತಿಭಟನೆಯಲ್ಲಿ ಖುದ್ದು ಶಾಸಕರೆ ಬಂದು ಕಾಮಗಾರಿ ಕುರಿತಂತೆ ವರದಿ ನೀಡಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, ಮುಖ್ಯ ರಸ್ತೆ ಅವ್ಯವಸ್ಥೆಯಿಂದಾಗಿ ವರ್ತಕರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದು, ಪ್ರತಿದಿನ ಹಲವಾರು ತೊಂದರೆ ಅನುಭವಿಸುತ್ತಿದ್ದಾರೆ. ನಿರಂತವಾಗಿ ಹೋರಾಟ ಮಾಡಿದರೂ ನಮ್ಮ ಸಮಸ್ಯೆಗೆ ಯಾರೊಬ್ಬರೂ ಪರಿಹಾರ ಕಲ್ಪಿಸಿಲ್ಲ. ರಾಜ್ಯದ ಹಲವೆಡೆ ಬಿಜೆಪಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಇಗಾಗಲೇ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ನಿನ್ನೆಯಷ್ಟೆ ಹೀರೆಕೆರೂರ ಅನರ್ಹ ಶಾಸಕ ಬಿ.ಸಿ.ಪಾಟೀಲ ರಸ್ತೆ ಅಭಿವೃದ್ಧಿಗೆ 26 ಕೋಟಿ ರೂ. ಅನುದಾನ ತಂದಿದ್ದಾರೆ. ಅವರಿಗಿರುವ ಇಚ್ಚಾ ಶಕ್ತಿ ನಮ್ಮ ಶಾಸಕರಿಗೇಕಿಲ್ಲ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next