ಚನ್ನಪಟ್ಟಣ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸುತ್ತಿರುವ ರೇಷ್ಮೆಗೂಡು ರೀಲರ್‌ಗಳ ನೆರವಿಗೆ ಸರ್ಕಾರ ಧಾವಿಸ ಬೇಕೆಂದು ಆಗ್ರಹಿಸಿ ಮಾರುಕಟ್ಟೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದೇ ರೈತರು ಪ್ರತಿಭಟನೆ ನಡೆಸಿದರು.
ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬೆಳಗ್ಗೆ 10 ಗಂಟೆಗೆ ರೇಷ್ಮೆಗೂಡು ಹರಾಜು ಪ್ರಕ್ರಿಯೆ ಪ್ರಾರಂಭವಾಗಬೇಕಾಗಿತ್ತು. ಆದರೆ, ಮಧ್ಯಾಹ್ನ 12 ಗಂಟೆ ಆದರೂ ರೀಲರ್‌ಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಖರೀದಿಸಿ ಉತ್ಪಾದನೆ ಮಾಡಿದ ರೇಷ್ಮೆ ಮಾರಾಟ ಆಗದೇ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಸರ್ಕಾರ ಮಧ್ಯೆ ಪ್ರವೇಶ ಮಾಡಿ ರೀಲರ್‌ಗಳ ನೆರವಿಗೆ ಬರಬೇಕು. ವೈಜಾnನಿಕ ದರದಲ್ಲಿ ರೇಷ್ಮೆ ಖರೀದಿ ಮಾಡಬೇಕು. ರೇಷ್ಮೆ ಸಾಗಣೆಗಾಗಿ ಅನುಮತಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ಮಾರುಕಟ್ಟೆಗೆ ಬಂದಿದ್ದ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ರೀಲರ್‌ಗಳ ಕುಂದುಕೊರತೆ, ಸಮಸ್ಯೆ ಕೇಳಲಿಲ್ಲ ಎಂದು ರೀಲರ್‌ಗಳು ಬೇಸರ ವ್ಯಕ್ತಪಡಿಸಿದ್ದರು. ತಾಲೂಕು, ಜಿಲ್ಲೆ ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ರೇಷ್ಮೆಗೂಡನ್ನು ಹೊತ್ತು ತಂದ ರೈತರು, ಹರಾಜು ಪ್ರಕ್ರಿಯೆ ನಡೆಯದಿರುವುದರಿಂದ ಬೇಸತ್ತು ಮಾರುಕಟ್ಟೆ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ಮಾರುಕಟ್ಟೆ ಅಧಿಕಾರಿ ಹೊನ್ನೇಗೌಡ ರೀಲರ್‌ಗಳಲ್ಲಿ ಮನವಿ ಮಾಡಿಕೊಂಡರೂ ಹಿರಿಯ ಅಧಿಕಾರಿಗಳು ಬಂದು ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ರೀಲರ್‌ಗಳು ಬಿಗಿಪಟ್ಟು ಹಿಡಿದು ಹರಾಜಿನಿಂದ ದೂರ ಉಳಿದಿದ್ದರು. ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರೇಷ್ಮೆ ಉಪ ನಿರ್ದೇಶಕ ಬಸವರಾಜು, ರೀಲರ್ ಸಂಘದ ಪದಾಧಿಕಾರಿಗಳು ಮತ್ತು ರೀಲರ್‌ಗಳೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ರೀಲರ್ ಸಂಘದ ಅಧ್ಯಕ್ಷ ಜಬೀವುಲ್ಲಾಖಾನ್ ಘೋರಿ, ಲಾಕ್‌ಡೌನ್‌ನಿಂದಾಗಿ ಸಾಲ ಮಾಡಿ ರೇಷ್ಮೆಗೂಡು ಖರೀದಿಸಿ ರೇಷ್ಮೆ ಉತ್ಪಾದನೆ ಮಾಡಿದರೆ ಮಾರುಕಟ್ಟೆಯಲ್ಲಿ ರೇಷ್ಮೆ ಸೂಕ್ತ ದರಕ್ಕೆ ಮಾರಾಟವಾಗುತ್ತಿಲ್ಲ. ಖರೀದಿ ಮಾಡಿದ ರೇಷ್ಮೆ ಗೂಡನ್ನು ನಾವು ಏನು ಮಾಡುವುದು, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಬಸವರಾಜು ವರದಿ ಯಂತೆ ರೇಷ್ಮೆಗೆ ವೈಜಾnನಿಕ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರ ಗಮನಕ್ಕೆ ಬೇಡಿಕೆ ತಂದು ಸಮಸ್ಯೆ ಬಗೆಹರಿಸಿಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರೇಷ್ಮೆ ಸಾಗಣೆಗೆ ಅನುಮತಿ ಕೊಡಿಸಲಾಗುವುದು ಎಂದು ಭರವಸೆ ನೀಡಿ ನಿಮ್ಮ ಜೊತೆ ನಾವಿರುತ್ತೇವೆ ಎಂದು ಸಂಘದ ಪದಾಧಿಕಾರಿಗಳು ಮತ್ತು ರೀಲರ್‌ಗಳ ಮನವೊಲಿಸುವಲ್ಲಿ ಸಫಲರಾದರು. ಅದಕ್ಕೆ ಸಮ್ಮತಿಸಿದ ರೀಲರ್‌ಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟರು. ಸಂದರ್ಭದಲ್ಲಿ ರೀಲರ್ ಸಂಘದ ಅಸ್ಲಂ ಚೌದ್ರಿ, ಶ್ರೀನಿವಾಸ್, ಪ್ರಸನ್ನ, ನೂರಾರು ಮಂದಿ ರೀಲರ್‌ಗಳು ಇದ್ದರು.