Advertisement

ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಸಂಘಟನೆಗಳ ಪ್ರತಿಭಟನೆ

11:44 AM May 05, 2019 | Team Udayavani |

ಬೀಳಗಿ: ರಾಯಚೂರು ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ವಿಶ್ವ ಹಿಂದೂ ಪರಿಷತ್‌ ಹಾಗೂ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನಗರದಲ್ಲಿ ಪ್ರತಿಭಟನೆ ನಡೆಸಿತು.

Advertisement

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ವಿದ್ಯಾರ್ಥಿನಿ ಹತ್ಯೆಯ ಹಿಂದಿನ ರಹಸ್ಯ ಬಯಲಾಗಬೇಕೆಂದು ಆಗ್ರಹಿಸಿ, ವ್ಯವಸ್ಥೆ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು. ಮಿನಿ ವಿಧಾನಸೌಧ ಆವರಣ ತಲುಪಿದ ಪ್ರತಿಭಟನಾ ಮೆರವಣಿಗೆ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು. ಕೆಲಕಾಲ ಪ್ರತಿಭಟನೆ ನಡೆಸಿ ಮೂಲಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು,

ವಿಶ್ವಕರ್ಮ ಸಮಾಜದ ಮುಖಂಡ ಪ್ರಭಾಕರ ಟಂಕಸಾಲಿ ಮಾತನಾಡಿ, ವಿದ್ಯಾರ್ಥಿನಿ ಮೇಲೆ ಆಗಿರುವ ಅತ್ಯಾಚಾರ ಶಂಕಿತ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರಗತಿಯಲ್ಲಿ ಬಂಧಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಿ, ಸೂಕ್ತ ಪರಿಹಾರ ನೀಡಬೇಕು. ಈ ಪ್ರಕರಣದ ತೀರ್ಪು ಸಮಾಜಘಾತುಕ ಶಕ್ತಿಗಳಿಗೆ ಪಾಠವಾಗಬೇಕು. ಪ್ರಕರಣ ಶೀಘ್ರ ಇತ್ಯರ್ಥವಾಗಬೇಕು. ಇಲ್ಲದಿದ್ದರೆ, ಪ್ರತಿಭಟನೆ ಸ್ವರೂಪವನ್ನು ತೀವ್ರಗೊಳಿಸುವ ಮೂಲಕ ನ್ಯಾಯ ಸಿಗುವವರೆಗೂ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆ.ಎನ್‌.ಬಡಿಗೇರ, ನಾಗರಾಜ ಟಂಕಸಾಲಿ, ಸಂಗಪ್ಪ ಕಟಗೇರಿ, ವಿ.ಜಿ.ರೇವಡಿಗಾರ, ಪಂಡಲೀಕ ದಳವಾಯಿ, ಎಸ್‌.ಎನ್‌.ಮುತ್ತಗಿ, ವಿದ್ಯಾ ಟಂಕಸಾಲಿ, ರುಕ್ಮಿಣಿ ಬಡಿಗೇರ, ವಿಠuಲ ಕಂಬಾರ, ಗೀತಾ ಬಡಿಗೇರ, ಜಯಶ್ರೀ ನಿರುಗ್ಗಿ, ವೀರಣ್ಣ ತೋಟದ, ಕಸ್ತೂರಿ ಬಡಿಗೇರ, ಮಲ್ಲಪ್ಪ ಬಡಿಗೇರ, ದ್ಯಾಮಣ್ಣ ಬಡಿಗೇರ, ದುಂಡಪ್ಪ ಬಡಿಗೇರ ಇತರರು ಇದ್ದರು.

ನೊಂದ ಕುಟುಂಬಕ್ಕೆ ನ್ಯಾಯ ಕೊಡಿ

Advertisement

ಜಮಖಂಡಿ: ರಾಯಚೂರು ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಸ್ಥಳೀಯ ವಿಶ್ವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ವಿಶ್ವ ನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ರಮೇಶ ಬೀಳಗಿ ಮಾತನಾಡಿ, ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಮಹೇಶ ವಡ್ಡರ, ತಾಲೂಕಾಧ್ಯಕ್ಷ ಮಹಾದೇವ ಮಾಲೋಜಿ, ಮಹೇಶ ನಿಂಗನೂರ, ನಿವೃತ್ತಿನಾಥ ವಾಸ್ಟರ, ಶಿವು ಗಸ್ತಿ, ಶ್ರೀಕಾಂತ ಕಾಳೆ, ಸಾಗರ ಸುತ್ತಾರ, ನಾಗ ರಾಜ ಕಣಬೂರ, ಸಾರಕ ಚನಾಳ, ಬಸವರಾಜ ಸಸಲಾದಿ, ದಶರಥ ಝಂಡೆ, ಶ್ರೀಶೈಲ ಮೊಸಗಡಿ, ಬಸವರಾಜ ತುಬಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next