Advertisement

ಅಭಿವೃದ್ಧಿಗೆ ಮುತ್ತಿಗೆ ಗ್ರಾಮಸ್ಥರ ಪ್ರತಿಭಟನೆ

03:10 PM Dec 21, 2019 | Suhan S |

ಆಲೂರು: ಮಗ್ಗೆ ರಸ್ತೆಯಿಂದ ಮುತ್ತಿಗೆ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಎರಡು ದಶಕಗಳೇ ಕಳೆದರೂ ಯಾವುದೇ ಅಧಿಕಾರಿ ಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಅಂಬೇಡ್ಕರ್‌ ಸಮುದಾಯ ಭವನದ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮದ ಮುಖಂಡರು, ತಾಲೂಕಿನ ಕುಂದೂರು ಹೋಬಳಿ ಕದಾಳು ಗ್ರಾಪಂ ವ್ಯಾಪ್ತಿಗೆ ಸೇರಿದ ಮುತ್ತಿಗೆ ಗ್ರಾಮ, ಆಲೂರು ಪಟ್ಟಣದಿಂದ ಸುಮಾರು 7 ಕಿ.ಮೀ. ದೂರ ದಲ್ಲಿದೆ. ಅಲ್ಲದೆ ಈ ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು ಶೇ.90 ಪರಿಶಿಷ್ಟ ಸಮುದಾಯದವರೇ ವಾಸವಿದ್ದಾರೆ. ಆದರೆ, ಗ್ರಾಮಕ್ಕೆ ಸಿಗಬಹುದಾದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ದೂರಿದರು.

ಗ್ರಾಮಸ್ಥ ಪುಟ್ಟಯ್ಯ ಮಾತನಾಡಿ, ಶಾಸಕ ಎಚ್‌.ಕೆ. ಕುಮಾರ ಸ್ವಾಮಿ ಅವರು 3 ಬಾರಿ ಶಾಸಕರಾದರೂ ಗ್ರಾಮಕ್ಕೆ ಒಂದು ನಯಾ ಪೈಸೆ ಕೂಡ ಕೆಲಸ ಮಾಡಿಲ್ಲ. ಶಾಸಕರು ಅವರಿಗೆ ಬೇಕಾದ ಕಡೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ನಮ್ಮ ಗ್ರಾಮಕ್ಕೆ ಬಂದು ರಸ್ತೆ ಕಾಮಗಾರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಆದರೆ, ಇದುವರೆಗೂ ಇತ್ತ ತಿರುಗಿ ನೋಡಿಲ್ಲ. ರಸ್ತೆ ಅಧ್ವಾನದಿಂದ ಕೆಎಸ್‌ಆರ್‌ಟಿಸಿ ಬಸ್‌ ಸೇರಿ ಯಾವುದೇ ವಾಹನದ ಚಾಲಕರು ಗ್ರಾಮಕ್ಕೆ ಬಾರದೇ ಟಿ. ತಿಮ್ಮನಹಳ್ಳಿ ಗೇಟಿನಿಂದಲೇ ವಾಪಸ್‌ಹೋಗುತ್ತಿದ್ದಾರೆ. ಹೀಗಾಗಿ  ಜನಸಾಮಾನ್ಯರು 5 ಕಿ.ಮೀ ನಡೆದೇ ಹೋಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ದೇವರಾಜು ತಿಮ್ಮಯ್ಯ, ಪುಟ್ಟಯ್ಯ ವೆಂಕಟೇಗೌಡ ಚೆನ್ನಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next