Advertisement
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಅಬಕಾರಿ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಜ.8ರಂದು ಹೋರಾಟ ರೂಪಿಸಿದಾಗ ಒಂದು ಮದ್ಯದಂಗಡಿ ಸ್ಥಗಿತಗೊಳಿಸಿ ಮತ್ತೂಂದು ಮದ್ಯದಂಗಡಿ ಬಂದ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಬಂದ್ ಮಾಡಿದ ಮದ್ಯದಂಗಡಿ ಮತ್ತೆ ಸಂಜೆ ಆರಂಭವಾಗಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತೆ ಕಾಲಾವಕಾಶ ಕೋರಿದ್ದು ಸರಿಯಲ್ಲ ಎಂದರು.ರಾಮಮಂದಿರ ಬಳಿ 100 ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿಯಿರುವುದು ಕಾನೂನು ಬಾಹಿರವಾಗಿದೆ. ಸೂಕ್ತ ಕ್ರಮದ ಭರವಸೆ ನೀಡಲಾಗಿತ್ತು. ಆದರೂ ಈಗ ಮದ್ಯದಂಗಡಿ ಮತ್ತೆ ಆರಂಭಿಸಲು ಅನುಮತಿ ನೀಡಲಾಗಿದೆ. ಅದೇ ರೀತಿ ಉದ್ಯಾನವನ ಬಳಿ ನೋಟಿಸ್ ಜಾರಿ ಮಾಡುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಕೂಡಲೇ ಕಾನೂನು ಕ್ರಮದ ಮೂಲಕ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.